ಕಾಸರಗೋಡು: ಸುವರ್ಣ ಮಹೋತ್ಸವ ಆಚರಿಸುತ್ತಿರುವ ಐಎಂಎ ಕಾಸರಗೋಡು ಶಾಖೆಯ ಸೇವಾಯೋಜನೆಯನ್ವಯ ನಗರದ ನುಳ್ಳಿಪ್ಪಾಡಿ ಸರ್ಕಾರಿ ಯುಪಿ ಶಾಲೆಗೆ ಪೀಠೋಪಕರಣಗಳ ಕೊಡುಗೆ ನೀಡಲಾಯಿತು.
ಕಾಸರಗೋಡು ಶಾಖೆಯ ಅಧ್ಯಕ್ಷ ಡಾ.ಬಿ.ನಾರಾಯಣ ನಾಯ್ಕ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಎ.ವಿ.ಭರತನ್, ಐಎಂಎ ಸ್ಥಾಪಕ ಕಾರ್ಯದರ್ಶಿ ಡಾ ಬಿ ಎಸ್ ರಾವ್, ವಾರ್ಡ್ ಕೌನ್ಸಿಲರ್ ವಿಮಲಾ, ಶಾಖಾ ಕಾರ್ಯದರ್ಶಿ ಡಾ ಟಿ ಕಾಸಿಂ, ಸುವರ್ಣ ಮಹೋತ್ಸವ ಆಚರಣೆ ಸಮಿತಿ ಸಂಚಾಲಕ ಡಾ ಜನಾರ್ದನ ನಾಯ್ಕ್, ಐಎಂಎ ಕಾರ್ಯದರ್ಶಿ ಡಾ ಖಾಸಿಂ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಉಮ್ಮರ್, ಪಿಟಿಎ ಅಧ್ಯಕ್ಷೆ ಉಷಾಕುಮಾರಿ, ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಕೃಷ್ಣನಾಯ್ಕ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಶ್ರೀಲತಾ ವಂದಿಸಿರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಬಿರ ಸೇರಿದಂತೆ ವಿವಿಧ ಮುಂದುವರಿಕಾ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಡಾ. ಬಿ. ನಾರಾಯಣ ನಾಯ್ಕ್ ತಿಳಿಸಿದರು.
ಐಎಂಎ ಸೇವಾ ಯೋಜನೆ: ನುಳ್ಳಿಪ್ಪಾಡಿ ಶಾಲೆಗ ಪೀಠೋಪಕರಣ ಹಸ್ತಾಂತರ
0
ಸೆಪ್ಟೆಂಬರ್ 03, 2022
Tags