ಬದಿಯಡ್ಕ: ಎಡನೀರು ಮಠದೀಶÀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದ್ವಿತೀಯ ಚಾತುರ್ಮಾಸ್ಯ ವ್ರತದ ಅಂಗವಾಗಿ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಿಂದ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಣೆ ನಡೆಯಿತು.
ಶ್ರೀ ಉದನೇಶ್ವರ ಆಡಳಿತ ಸಮಿತಿ, ಸೇವಾ ಸಮಿತಿ ಮತ್ತು ಭಕ್ತ ವೃಂದ ವತಿಯಿಂದ ಎಡನೀರು ಮಠಕ್ಕೆ ಹಸಿರು ವಾಣಿ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಆಡಳಿತ ಸಮಿತಿ ಅಧ್ಯಕ್ಷ ವೆಂಕಟರಮಣ ಭಟ್, ಸದಸ್ಯರಾದ ಪಿ.ಜಿ. ಜಗನ್ನಾಥ ರೈ, ಕೃಷ್ಣ ಪೆರಡಾಲ, ಜಗದೀಶ ಪೆರಡಾಲ, ಮಾಜಿ ಆಡಳಿತ ಮೊಕ್ತೇಸರ ಪಿ.ಜಿ. ಚಂದ್ರಹಾಸ ರೈ, ವಾರ್ಡ್ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ರಾಮ ಮರಿಯಂ ಕೂಡ್ಲು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.