ಪತ್ತನಂತಿಟ್ಟ: ಶಬರಿಮಲೆ ಯಾತ್ರಾರ್ಥಿಗಳಿಗೆ ಪಂಪಾ ನದಿಯಲ್ಲಿ ತೀರ್ಥಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸ್ನಾನ ಮಾಡುವುದನ್ನು ನಿಷೇಧಸಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ. ದಿವ್ಯಾ ಎಸ್ ಅಯ್ಯರ್ ಆದೇಶ ಹೊರಡಿಸಿದ್ದಾರೆ.
ಪಂಪಾದಲ್ಲಿ ಯಾತ್ರಾರ್ಥಿಗಳು ಸ್ನಾನ ಮಾಡದಂತೆ ಬ್ಯಾರಿಕೇಡ್‍ಗಳ ವ್ಯವಸ್ಥೆ ಮಾಡಬೇಕು ಮತ್ತು ಯಾತ್ರಾರ್ಥಿಗಳು ನದಿಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಏತನ್ಮಧ್ಯೆ, ಓಣಂ ದಿನದ ಪೂಜೆಗಳಿಗಾಗಿ ಶಬರಿಮಲೆ ದೇವಸ್ಥಾನವನ್ನು ಇಂದು ಸಂಜೆ 5 ಗಂಟೆಗೆ ತೆರೆಯಲಾಗುತ್ತದೆ. ದೇವಾಲಯ ತೆರೆದಿರುವ ದಿನಗಳಲ್ಲಿ ಉದಯಾಸ್ತಮಯ ಪೂಜೆ, ಅμÁ್ಟಭಿμÉೀಕ, ಕಲಶಾಭಿμÉೀಕ, ಕಲಭಾಭಿμÉೀಕ, ಪಡಿಪೂಜೆ, ಪುμÁ್ಪಭಿμÉೀಕ ನಡೆಯಲಿದೆ.
ಭಕ್ತರು ದರ್ಶನಕ್ಕೆ ವರ್ಚುವಲ್ ಸರತಿ ವ್ಯವಸ್ಥೆ ಬಳಸಬೇಕು. ನಿಲಯ್ಕಲ್ ನಲ್ಲಿ ಭಕ್ತರಿಗಾಗಿ ಸ್ಪಾಟ್ ಬುಕ್ಕಿಂಗ್ ಕೌಂಟರ್ ಗಳನ್ನು ಸಹ ಸ್ಥಾಪಿಸಲಾಗಿದೆ. ಹಾಗೆಯೇ ಉತ್ರಾಡದಿಂದ ನಾಲ್ಕು ದಿನಗಳವರೆಗೆ ಓಣ ಸದ್ಯ(ಭೋಜನ) ಲಭ್ಯವಾಗಲಿದೆ. ಸೆಪ್ಟೆಂಬರ್ 10 ರ ಶನಿವಾರ ರಾತ್ರಿ 10 ಗಂಟೆಗೆ ಹರಿವರಾಸನವನ್ನು ಹಾಡುವುದರೊಂದಿಗೆ ಗರ್ಭಗೃಹ ಮುಚ್ಚಲಾಗುತ್ತದೆ.
ಶಬರಿಮಲೆಯಲ್ಲಿ ಭಾರೀ ಮಳೆ; ಪಂಪಾ ಸ್ನಾನಕ್ಕೆ ತಾತ್ಕಾಲಿಕ ನಿಷೇಧ
0
ಸೆಪ್ಟೆಂಬರ್ 06, 2022