ಪೆರ್ಲ: ಕೆ.ಪಿ.ಮದನ ಮಾಸ್ತರ್ ಸ್ಮಾರಕ ಗ್ರಂಥಾಲಯದ ನೂತನ
ಕಚೇರಿ ಉದ್ಘಾಟನೆ ಹಾಗೂ ಓಣಂ ಆಚರಣೆಯು ಇಂದು(ಸೆ.11) ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.ಇದರ ಅಂಗವಾಗಿ ಅಂದು ಬೆಳಗ್ಗೆ 10ಗಂಟೆಗೆ ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಹುಸೈನ್ ಮಾಸ್ಟರ್ ನೂತನ ಕಛೇರಿಯನ್ನು ಉದ್ಘಾಟಿಸುವರು.ಗ್ರಂಥಾಲಯದ ಅಧ್ಯಕ್ಷ ಹರೀಶ್ ಸೇರಾಜೆ ಅಧ್ಯಕ್ಷತೆ ವಹಿಸುವರು.ಬಳಿಕ 11 ಗಂಟೆಯಿಂದ ಓಣಂ ನಾಡ ಹಬ್ಬ ಆಚರಣೆ,
ಪ್ರತಿಭಾ ಪುರಸ್ಕಾರ ಪ್ರದಾನ,ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ.ಜೆ.ಎಸ್. ಉದ್ಘಾಟಿಸುವರು.ಪಂ.ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್ ಅಧ್ಯಕ್ಷತೆ ವಹಿಸುವರು.
ಸದಾಶಿವ ಭಟ್ ಹರಿನಿಲಯ, ಆಯಿμÁ ಎ.ಎ ,ಸುಧಾಕರ ಮಾಸ್ಟರ್,ಉದಯ ಸಾರಂಗ್, ರಾಮಕೃಷ್ಣ ರೈ,ಗೋಪಾಲ ಬಜಕೂಡ್ಲು ಹಾಗೂ ವಿವಿಧ ರಂಗದ ಪ್ರಮುಖರು ಭಾಗವಹಿಸುವರು.ಬಳಿಕ ಕನಲ್ ನಾಟುಕೂಟಂ ಪಾಂಡಿ ಅವರಿಂದ ಜಾನಪದ ವೈವಿಧ್ಯ ಕಾರ್ಯಕ್ರಮ,ಆಟೋಟ ಸ್ಪರ್ಧೆಗಳು,ಓಣಂ ಔತಣ ಕೂಟ ಜರಗಲಿದೆ.
ಇಂದು ಕುರೆಡ್ಕದಲ್ಲಿ ಕೆ.ಪಿ.ಮದನ ಮಾಸ್ತರ್ ಸ್ಮಾರಕ ಗ್ರಂಥಾಲಯ ಕಚೇರಿ ಉದ್ಘಾಟನೆ ಹಗೂ ಓಣಂ ಆಚರಣೆ
0
ಸೆಪ್ಟೆಂಬರ್ 11, 2022