HEALTH TIPS

ಸೇನಾಪಡೆಗಳ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ಅಧಿಕಾರ ಸ್ವೀಕಾರ

 

              ನವದೆಹಲಿ: ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಹುದ್ದೆಗೆ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅನಿಲ್ ಚೌಹಾಣ್ ಅವರು ಇಂದು (ಶುಕ್ರವಾರ) ಅಧಿಕಾರ ಸ್ವೀಕರಿಸಿದರು.

              ಸೌತ್ ಬ್ಲಾಕ್‌ನಲ್ಲಿ ಗೌರವ ವಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಭಾರತೀಯ ಸಶಸ್ತ್ರ ಪಡೆಗಳ ಅತ್ಯುನ್ನತ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವುದಕ್ಕೆ ನಾನು ಹೆಮ್ಮೆಪಡುತ್ತಿದ್ದೇನೆ.ಸಿಡಿಎಸ್‌ ಮುಖ್ಯಸ್ಥನಾಗಿ ರಕ್ಷಣಾ ಪಡೆಗಳ ನಿರೀಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ. ಜತೆಗೆ ಎಲ್ಲಾ ಸವಾಲುಗಳನ್ನು ಒಟ್ಟಿಗೆ ನಿಭಾಯಿಸುತ್ತೇವೆ' ಎಂದು ಹೇಳಿದರು.


                   ಇದೇ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ, ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ನೌಕಾಪಡೆಯ ಉಪ ಅಡ್ಮಿರಲ್ ಎಸ್.ಎನ್.ಘೋರ್ಮಾಡೆ ಮತ್ತು ಏರ್ ಮಾರ್ಷಲ್ ಬಿ.ಆರ್ ಕೃಷ್ಣ ಉಪಸ್ಥಿತರಿದ್ದರು.

                 'ಅನಿಲ್ ಚೌಹಾಣ್ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಕೇಂದ್ರದ ರಕ್ಷಣಾ ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯಾಗಿಯೂ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸಲಿದ್ದಾರೆ' ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

                  ಅನಿಲ್ ಅವರು ತಮ್ಮ ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ ಸೇನೆಯ ಹಲವು ಹುದ್ದೆಗಳನ್ನು ನಿಭಾಯಿಸಿದ್ದು, ಈಶಾನ್ಯ ಭಾರತ ಮತ್ತು ಜಮ್ಮು-ಕಾಶ್ಮೀರದಲ್ಲಿ ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ.

             ಜನರಲ್ ಬಿಪಿನ್ ರಾವತ್ ಅವರ ದುರ್ಮರಣದಿಂದಾಗಿ ಒಂಬತ್ತು ತಿಂಗಳಿನಿಂದ ಸಿಡಿಎಸ್‌ ಹುದ್ದೆ ಖಾಲಿ ಇತ್ತು.

Delhi | General Anil Chauhan with his wife Anupama Chauhan in the office of Chief of Defence Staff after taking over today. He is India's second Chief of Defence Staff.
Image
7.1K
Reply
Copy link

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries