ಕಾಸರಗೋಡು: ನಗರದ ಕೂಡ್ಲು ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಪ್ರಮುಖ ಉತ್ಸವಗಳಾದ ಕಾರ್ತಿಕಮಾಸ ದೀಪೋತ್ಸವ ಹಾಗೂ ವಾರ್ಷಿಕ ಷಷ್ಠಿಜಾತ್ರೆಯನ್ನು ವೈಭªಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಉತ್ಸವ ಸಮಿತಿ ರಚನಾ ಸಭೆ ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನ ಟ್ರಸ್ಟ್‍ನ ಆಡಳಿತ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲುಅಧ್ಯಕ್ಷತೆ ವಹಿಸಿದ್ದರು. ಅಕ್ಟೋಬರ್ ತಿಂಗಳ 26 ರಂದು ಆರಂಭಗೊಂಡು ನವೆಂಬರ್ 23ರ ತನಕಒಂದು ತಿಂಗಳ ಪರ್ಯಂತ ನಡೆಯರುವ ಕಾರ್ತಿಕಮಾಸ ದೀಪೋತ್ಸವ ಹಾಗೂ ನವೆಂಬರ್ ತಿಂಗಳ 28 ಹಾಗು29 ರಂದು ಜರಗುವ ವಾರ್ಷಿಕ ಚಂಪಾ ಷಷ್ಠಿ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ಉತ್ಸವ ಸಮಿತಿಯನ್ನು ರಚಿಸಲಾಯಿತು.
ರಕ್ಷಾಧಿಕಾರಿಯಾಗಿ ಶ್ರೀಕ್ಷೇತ್ರದತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್‍ಪದ್ಮನಾಭ ತಂತ್ರಿವರ್ಯರು, ಗೌರವ ಅಧ್ಯಕ್ಷರಾಗಿ ಮಧೂರು ಕ್ಷೇತ್ರದ ಪ್ರಧಾನ ಅರ್ಚಕರಾದಶ್ರೀಕೃಷ್ಣ ಉಪಾದ್ಯಾಯರು, ಅಧ್ಯಕ್ಷರಾಗಿ ವೇಣುಗೋಪಾಲ ಬಾಮ, ಉಪಾಧ್ಯಕ್ಷರಾಗಿ ರಮೇಶ್ ರೈ, ಪ್ರಕಾಶ್ ಶೆಟ್ಟಿ, ಆಶಾ ಉಪಾಧ್ಯಾಯ, ಯಶೋದಾಕಾರಂತ, ಉಮಾವತಿ, ಕಾರ್ಯದರ್ಶಿಯಾಗಿ ಸನತ್ ಶಿವಮಂಗಲ, ಜತೆ ಕಾರ್ಯದರ್ಶಿಯಾಗಿ ಸುರೇಶ್‍ಮಣಿಯಾಣಿ, ಮುರಳೀಧರ ಶೆಟ್ಟಿ, ಲಾವಣ್ಯ,ಕೋಶಾಧಿಕಾರಿಯಾಗಿ ಸುರೇಶ್ ನಾಯ್ಕ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ತಿಕ ಮಾಸದಿಪೋತ್ಸವ ಸಮಿತಿಗೆ ಆರ್ಥಿಕ ಸಮಿತಿಸಂಚಾಲಕ, ಪ್ರಕಾಶ್ ಶೆಟ್ಟಿ, ಆಹಾರ ¸ಮಿತಿ ಸಂಚಾಲಕ ರಮೆಶ್ ಕಾಞÂರತ್ತಡಿ, ವೈದಿಕ ಸಮಿತಿಗೆ ವೇಣುಗೋಪಾಲಮಾಸ್ಟರ್, ಧ್ವನಿ ಬೆಳಕು ಮತ್ತು ಅಲಂಕಾರ ಸಮಿತಿ ಸಂಚಾಲಕರಾಗಿ ರಾಹುಲ್ ಪಾಯಿಚ್ಚಾಲು, ಸ್ವಯಂಸೇವಾ ¸ಮಿತಿಸಂಚಾಲಕ ಜಯಪ್ರಕಾಶ್, ಶುಚಿತ್ವ ಸಮಿತಿ ಸಂಚಾಲಕ ನವೀನ ಬಾದಾರ, ಭಜನೆ ಸಮಿತಿ ಸಂಚಾಲಕ ಗೋಪಾಲಕೃಷ್ಣ ಬಲ್ಯಾಯ, ನೀರು ವ್ಯವಸ್ಥೆ ಸಮಿತಿ ಸಂಚಾಲಕ ಅನಿಲ್ ಪೂಕರೆ, ಪ್ರಸಾದ ವಿತರಣಾ ಸಮಿತಿ ಭುವನೇಶ್ ಆಚಾರ್ಯ, ಸಾಂಸ್ಕøತಿಕ ಕಾರ್ಯಕ್ರಮಸಮಿತಿ ಸಂಚಾಲಕರಾಗಿ ಗೊಪಾಲ ಪಾಯಿಚ್ಚಾಲು ಮತ್ತುಪ್ರಮೀಳ ಇವರನ್ನು ಆಯ್ಕೆ ಮಾಡಲಾಯಿತು. ಟ್ರಸ್ಟ್ ಕಾರ್ಯದರ್ಶಿವಸಂತ ಸ್ವಾಗತಿಸಿ, ಸನತ್ ಶಿವಮಂಗಲ ವಂದಿಸಿದರು.