ಕಾಸರಗೋಡು: ಓಣಂ ಆಚರಣೆಯನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಂತಿಮ ಸಿದ್ಧತೆ ನಡೆಸುತ್ತಿದ್ದು, ಜಿಲ್ಲಾಡಳಿತದ ಸಹಯೋಗದಲ್ಲಿ
ಡಿಟಿಪಿಸಿಯ ಓಣಂ ಆಚರಣೆಯು ಐದು ದಿನಗಳವರೆಗೆ ನಡೆಯಲಿದೆ.
ಸೆ.6ಮತ್ತು 7ರಂದು ಕಾಸರಗೋಡು ವಿದ್ಯಾನಗರ ಮುನ್ಸಿಪಲ್ ಸ್ಟೇಡಿಯಂ ಕಾರ್ನರ್, 9ಹಾಗೂ 10ರಂದು ಕಾಂಞಂಗಾಡ್ ಹೆರಿಟೇಜ್ ಸ್ಕ್ವೇರ್‍ನಲ್ಲಿ ಕಾರ್ಯಾಕ್ರಮ ನಡೆಯಲಿದ್ದು, ಈ ಎಲ್ಲ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತಗಿರಲಿದೆ. ಸೆ. 6ರಂದು ಬೆಳಗ್ಗೆ 9.30ಕ್ಕೆ ಮಾವೇಲಿ, ವಾಮನ ಮತ್ತು ಹುಲಿವೇಷಧಾರಿಗಳ ನರ್ತನ ಒಳಗೊಂಡ ಘೋಷಣಾ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಸಂಜೆ 6ಕ್ಕೆ ನಗರಸಭಾ ಸ್ಟೇಡಿಯಂನಲ್ಲಿ ಕುಟುಂಬಶ್ರೀ ಕಾರ್ಯಕರ್ತರಿಂದ ತಿರುವಾತಿರಕಳಿ, ಒಪ್ಪನ ನಡೆಯುವುದು. ಈ ಸಂದರ್ಭ ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳ ಕಲಾವಿದರ ನೃತ್ಯ ಪ್ರದರ್ಶನವೂ ನಡೆಯುವುದು. ಉತ್ರಾಡಂನ ಎರಡನೇ ದಿನದಂದು ಸಂಜೆ 6 ಗಂಟೆಗೆ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡದಿಂದ ಯಕ್ಷಗಾನ ಗೊಂಬೆಯಾಟ ನಡೆಯಲಿದೆ. ತಿರುವೋಣಂ ದಿನವಾದ ಗುರುವಾರ ಪರವನಡ್ಕದ ಸರ್ಕಾರಿ ವೃದ್ಧಾಶ್ರಮದ ಕೈದಿಗಳೊಂದಿಗೆ ಓಣಂ ಆಚರಣೆ. ಶುಕ್ರವಾರ ಬೆಳಗ್ಗೆ 8ರಿಂದ ಕಾಞಂಗಾಡ್ ಹೆರಿಟೇಜ್ ಸ್ಕ್ವೇರ್ ನಲ್ಲಿ ಹೂವಿನ ಸ್ಪರ್ಧೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸೆ. 10ರಂದು ಸಂಜೆ 7ಕ್ಕೆ ಡಿಟಿಪಿಸಿ ಓಣಂ ಆಚರಣೆಗಳು ರೇಬಂಟ್ ಆರ್ಕೆಸ್ಟ್ರಾದ ಸಂಗೀತ ಕಚೇರಿಯೊಂದಿಗೆ ಮುಕ್ತಾಯಗೊಳ್ಳಲಿವೆ.
ಪ್ರವಾಸೋದ್ಯಮ ಇಲಾಖೆಯಿಂದ ಓಣಂ ಆಚರಣೆ: ವಿವಿಧ ಕಾರ್ಯಕ್ರಮ
0
ಸೆಪ್ಟೆಂಬರ್ 05, 2022