ನವದೆಹಲಿ: ಕೇಂದ್ರ ಗೃಹ ಸಚಿವಾಲಯ ರಾಜ್ಯ ಸರ್ಕಾರದಿಂದ ವರದಿ ಕೇಳಿದೆ. ಎನ್‍ಐಎ ಕ್ರಮವನ್ನು ವಿರೋಧಿಸಿ ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ನಿನ್ನೆ ನಡೆಸಿದ ಹರತಾಳದ ಸಮಗ್ರ ವರದಿಯನ್ನು ಕೇಂದ್ರವು ಕೇಳಿದೆ.
ಹರತಾಳದಲ್ಲಿ ಕಾರ್ಯಕರ್ತರು ರಾಜ್ಯಾದ್ಯಂತ ಹಿಂಸಾಚಾರ ನಡೆಸಿದ್ದರು. ಘಟನೆಯಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ವಾದಗಳಿವೆ. ಇದರ ಬೆನ್ನಲ್ಲೇ ಕೇಂದ ವರದಿ ಕೇಳಿದೆ.
ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ರಾಜ್ಯದಲ್ಲಿ ನಿರಾಳವಾಗಿ, ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಿ ಜನರ ವಿರುದ್ಧ ಹಿಂಸಾಚಾರ ನಡೆಸಿದ್ದಾರೆ. 70 ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಕಲ್ಲು ತೂರಾಟದಿಂದ ಧ್ವಂಸಗೊಳಿಸಲಾಗಿದೆ ಎಂದು ಸರ್ಕಾರ ಹೈಕೋರ್ಟ್‍ಗೆ ವರದಿ ಸಲ್ಲಿಸಿದೆ. ಖಾಸಗಿ ವಾಹನಗಳ ಮೇಲೂ ದಾಳಿ ನಡೆಸಲಾಗಿದೆ. ಆಂಬ್ಯುಲೆನ್ಸ್ ಮೇಲೂ ಕಲ್ಲು ತೂರಾಟ ನಡೆದಿದೆ. ದಾಳಿಕೋರರು ಬೈಕ್‍ನಲ್ಲಿ ಬಂದ ಪೋಲೀಸರನ್ನು ಕೆಳಗಿಳಿಸಿ ಮಾಧ್ಯಮ ಕಾರ್ಯಕರ್ತರ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಕಣ್ಣೂರಿನಲ್ಲಿ ಎರಡು ಬಾಂಬ್ ಸ್ಫೋಟಗಳು ನಡೆದಿವೆ. ಕಲ್ಯಾಶ್ಶೇರಿಯಲ್ಲಿ ಬಾಂಬ್ ಸಮೇತ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತನ ಬಂಧನ ನಡೆದಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಕಾರ್ಯಕರ್ತರನ್ನು ಪೆÇಲೀಸರು ಬಂಧಿಸಿದ್ದಾರೆ. 229 ಜನರನ್ನು ಬಂಧಿಸಲಾಗಿದೆ. ಇದೇ ವೇಳೆ ದೇಶದ ವಿವಿಧೆಡೆ ಬಂಧಿತರಾಗಿರುವ ಮುಖಂಡರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ದಾಳಿಯಲ್ಲಿ ವಶಪಡಿಸಿಕೊಂಡ ಡಿಜಿಟಲ್ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಸೋಮವಾರ ಮತ್ತೆ ಪಿಎಫ್‍ಐ ಮುಖಂಡರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಈ ನಡುವೆ ಜಾರಿ ನಿರ್ದೇಶನಾಲಯ ಪಾಪ್ಯುಲರ್ ಫ್ರಂಟ್ ವಿರುದ್ಧ ಗಂಭೀರ ಆರೋಪ ಮಾಡಿದೆ. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಪಾಪ್ಯುಲರ್ ಫ್ರಂಟ್ ಸಂಚು ರೂಪಿಸಿತ್ತು ಎಂದು ಆರೋಪಿಸಲಾಗಿದೆ. ಕೇರಳದಿಂದ ಇ.ಡಿ. ಗುರುವಾರ ಬಂಧಿಸಿರುವ ಶಫೀಕ್ ಪಿ ಎಂಬಾತನ ರಿಮಾಂಡ್ ವರದಿಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.
ಪಿ.ಎಫ್.ಐ. ಹರ್ತಾಳ್: ಸರ್ಕಾರಕ್ಕೆ ತಲೆನೋವು: ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ
0
ಸೆಪ್ಟೆಂಬರ್ 24, 2022
Tags