ನರಸಿಂಗ್ ಪುರ: ಆದಿ ಶಂಕರಾಚಾರ್ಯ ಪರಂಪರೆಯ ದ್ವಾರಕಾ ಹಾಗೂ ಜ್ಯೋತಿರ್ಪೀಠದ ಜಗದ್ಗುರು ಸ್ವಾಮಿ ಸ್ವರೂಪಾನಂದ ಸರಸ್ವತಿಗಳು (99) ಸೆ.11 ರಂದು ಪರಮಾತ್ಮನಲ್ಲಿ ಲೀನರಾದರು.
ಮಧ್ಯಪ್ರದೇಶದ ನರಸಿಂಗ್ ಪುರ ನಗರದಲ್ಲಿ ಶ್ರೀಗಳ ದೇಹಾಂತ್ಯವಾಗಿದೆ.
1924 ರಲ್ಲಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಜನಿಸಿದ್ದ ಸ್ವರೂಪಾನಂದ ಸರಸ್ವತಿ ಶ್ರೀಗಳ ಪೂರ್ವಾಶ್ರಮದ ಹೆಸರು ಪೋತಿರಾಮ್ ಉಪಾಧ್ಯಾಯ. ಉತ್ತರಾಮ್ನಾಯ ಮಠ ಜ್ಯೋತಿರ್ಪೀಠದ ಬ್ರಹ್ಮಾನಂದ ಸರಸ್ವತಿಗಳ ಶಿಷ್ಯರಾಗಿದ್ದ ಪೋತಿರಾಮ್ ಉಪಾಧ್ಯಾಯ ಅವರಿಗೆ 1950 ರಲ್ಲಿ ಬ್ರಹ್ಮಾನಂದ ಸರಸ್ವತಿಗಳು ಸಂನ್ಯಾಸ ದೀಕ್ಷೆ ನೀಡಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂಬ ಯೋಗಪಟ್ಟ ನೀಡಿದ್ದರು. ಸ್ವರೂಪಾನಂದ ಸರಸ್ವತಿಗಳು ಸ್ವಾಮಿ ಕರಪಾತ್ರಿ ಮಹಾರಾಜರು ಸ್ಥಾಪಿಸಿದ್ದ ಅಖಿಲ ಭಾರತೀಯ ರಾಮ ರಾಜ್ಯ ಪರಿಷತ್ ನ ಅಧ್ಯಕ್ಷರೂ ಆಗಿದ್ದರು.
