ಪೆರ್ಲ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪೆರ್ಲ ನೇತೃತ್ವದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ 51ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಬುಧವಾರ ಬೆಳಗ್ಗೆ ಗಣಪತಿಹೋಮ, ಗಣಪತಿ ಪ್ರತಿμÉ್ಠ, ವೇದಘೋಷ ನಡೆಯಿರು.
ಬಿ.ಜಿ.ರಾಮ ಭಟ್ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಗೋಣೇಶೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಭಜನಾ ತಂಡಗಳಿಂದ ಭಜನೆ, ಮಕ್ಕಳು, ಮಹಿಳೆಯರು, ಸಾರ್ವಜನಿಕ ವಿಭಾಗದ ಸ್ಪರ್ಧೆಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಭಜನೆ ಕಾರ್ಯಕ್ರಮಗಳು ನಡೆದವು.
ಸಂಜೆ ಪೆರ್ಲ ಶಾಲೆಯ ನಿವೃತ್ತ ಶಿಕ್ಷಕ ಎಚ್.ಎನ್.ಪರಮೇಶ್ವರ ಹೆಬ್ಬಾರ್ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆರ್ ಎಸ್ ಎಸ್ ಮಂಗಳೂರು ವಿಭಾಗ ಸಂಯೋಜಕ್, ಕುಟುಂಬ ಪ್ರಬೋಧನ್ ಗಜಾನನ ಪೈ ಧಾರ್ಮಿಕ ಭಾಷಣ ಮಾಡಿದರು.
ಜಲ ಶೋಧಕ, ಸುರಂಗ ತಜ್ಞ ರಾಮ ನಾಯ್ಕ ಖಂಡಿಗೆ ಅವರನ್ನು ಸನ್ಮಾನಿಸಲಾಯಿತು.ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ 'ಗಧಾಯುದ್ಧ- ರಕ್ತರಾತ್ರಿ' ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
ಗುರುವಾರ ಬೆಳಗ್ಗೆ ಗಣಪತಿಹೋಮ, ಶ್ರೀ ಶಂಕರ ವೇದಪಾಠಶಾಲೆ ಪೆರ್ಲ ಇವರಿಂದ ವೇದಘೋಷ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ಶೋಭಾಯಾತ್ರೆ, ಸುಡುಮದ್ದು ಪ್ರದರ್ಶನ ನಡೆಯಿತು.