ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕದ ಪಾವತಿಗೆ ಅ.1ರಿಂದ ಟೋಕನೈಸೇಷನ್ ಕಡ್ಡಾಯವಾಗಿದ್ದು, ಆನ್ಲೈನ್ ಪಾವತಿಗೆ ಸಿವಿವಿ ಅಥವಾ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬದಲು ಟೋಕನ್ ನಂಬರ್ ನೀಡುವಂತೆ ಆರ್ಬಿಐ ಸೂಚಿಸಿದೆ. ಇದರ ಉದ್ದೇಶ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ವಿವರದ ಸಂರಕ್ಷಣೆ ಆಗಲಿದೆ.
*
ಅ. 1ರ ನಂತರ ಆನ್ಲೈನ್ ಪಾವತಿಯ ಗೇಟ್ ವೇಗಳು ಗ್ರಾಹಕರ ಡಿಬಿಟ್ ಅಥವಾ ಕ್ರೆಡಿಟ್
ಕಾರ್ಡ್ಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
* ಕಾರ್ಡ್ನ 16 ಅಂಕಿಗಳು ಮತ್ತು ಕಾರ್ಡ್ ಕಾರ್ಯಾವಧಿಯ ಅಂತಿಮ ದಿನಾಂಕವನ್ನು ನಮೂದು ಮಾಡುವ ಪ್ರಕ್ರಿಯೆ ಸೆ. 30ಕ್ಕೆ ಮುಗಿಯಲಿದೆ.
* ಕಾರ್ಡ್ ವಿವರದ ಬದಲಿಗೆ ಟೋಕನ್ ನಂಬರ್ ನಮೂದು ಮಾಡಬೇಕು.
* ಹೊಸ ಪ್ರಕ್ರಿಯೆಯಿಂದ ಕಾರ್ಡ್ 16 ಅಂಕಿ, ಕಾರ್ಡ್ ಕಾರ್ಯಾವಧಿಯ ಅಂತಿಮ ದಿನಾಂಕ ಸಂಗ್ರಹಿತ ವಾಗಿರುವುದಿಲ್ಲ. ಟೋಕನ್ ನಂಬರ್ ಚಾಲ್ತಿ ಆಗುತ್ತದೆ.
ಟೋಕನೈಸೇಷನ್ ಪ್ರಕ್ರಿಯೆ
*ಆನ್ಲೈನ್ ಮೂಲಕ ಟೋಕನೈಸೇಷನ್ ಮಾಡಿಸಲು ಗ್ರಾಹಕರು 'ಕಾರ್ಡ್ ಸುರಕ್ಷತೆ ಗೊಳಿಸಿ' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ಆಯ್ಕೆಯ ನಂತರ ನೋಂದಾಯಿತ ಮೊಬೈಲ್ಗೆ ಒಟಿಪಿ ರವಾನೆ. ಇದನ್ನು ವೆಬ್ಪುಟದಲ್ಲಿ ನಮೂದಿಸುತ್ತಿದಂತೆ ಟೋಕನೈಸೇಷನ್ ಪ್ರಕ್ರಿಯೆ ಶುರು.
* ಟೋಕನ್ ಸಂಖ್ಯೆಯನ್ನು ಪಾವತಿ ಮಾಡಬೇಕಾದವರೊಂದಿಗೆ ಅಂದರೆ, ಆನ್ಲೈನ್ ಪಾವತಿಗಳು, ಪಾಯಿಂಟ್ ಆಫ್ ಸೇಲ್ ಹಂಚಿಕೊಳ್ಳಲು ಅಡ್ಡಿಯಿಲ್ಲ.
* ಪದೇ ಪದೇ ಇಂಥ ಪಾವತಿಗಳು ಬಂದಾಗ ನಿಮ್ಮ ಟೋಕನ್ ಸಂಖ್ಯೆ ಸ್ವಯಂಚಾಲಿತವಾಗಿಯೇ ಪರದೆ
ಮೇಲೆ ಕಾಣುತ್ತದೆ. ಅದನ್ನು ಖಾತ್ರಿ ಮಾಡಿಕೊಂಡು ಕ್ಲಿಕ್ ಮಾಡಿದರೆ ಪಾವತಿ ಸಲೀಸು.