ಕಾಸರಗೋಡು: ಅಣಂಗೂರು ಶ್ರೀ ಶಾರದಾಂಬಾ ಭಜನಾಮಂದಿರದಲ್ಲಿ ನವರಾತ್ರಿ ಮಹೋತ್ಸವ ಸೆ. 26ರಿಂದ ಅ. 4ರ ವರೆಗೆ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದು. 26ರಂದು ಬೆಳಗ್ಗೆ 8.30ಕ್ಕೆ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ಪ್ರತಿದಿನ ರಾತ್ರಿ 8ಕ್ಕೆ ಭಜನೆ ಆರಂಭಗೊಂಡು 9ಕ್ಕೆ ಮಹಾಪೂಜೆ ನಡೆಯುವುದು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ 26ರಂದು ರಆತ್ರಿ 9.30ಕ್ಕೆ ಗಾನ ಸಿಂಚನ, 27ರಂದು ರಾತ್ರಿ 9.30ಕ್ಕೆ ನಾಟ್ಯಾರ್ಚನೆ, 28ರಂದು ರಾತ್ರಿ 9.30ಕ್ಕೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, 29ರಂದು ರಾತ್ರಿ 9.30ಕ್ಕೆ ಭಕ್ತಿರಸಮಂಜರಿ, 30ರಂದು ರಾತ್ರಿ 9.30ಕ್ಕೆ ಗೀತಾಸಾಹಿತ್ಯ ಸಂಭ್ರಮ, ಅ. 1ರಂದು ರಾತ್ರಿ 9.30ಕ್ಕೆ ಶ್ರೀದೇವೀ ಮಹಿಷಮರ್ದಿನಿ ಯಕ್ಷಗಾನ ಬಯಲಾಟ ನಡೆಯುವುದ.
2ರಂದು ಮಧ್ಯಾಹ್ನ 12ಕ್ಕೆ ಲಲಿತಾಸಹಸ್ರನಾವi ಪಾರಾಯಣ, ರಾತ್ರಿ 11ಕ್ಕೆ ವರ್ಣಾಲಂಕಾರ ಮಹಾಪೂಜೆ, 3ರಂದು ರಾತ್ರಿ 9.30ಕ್ಕೆ ಕಲಾಸಂಭ್ರಮ, 4ರಂದು ಬೆಳಗ್ಗೆ 9.30ಕ್ಕೆ ವಾಹನ ಪೂಜೆ, ಸಂಜೆ 6ಕ್ಕೆ ಧಾರ್ಮಿಕ ಸಭೆ, ಛದ್ಮವೇಷ ಸ್ಪರ್ಧೆ ನಡೆಯುವುದು. ಧಾರ್ಮಿಕ ಸಭೆಯಲ್ಲಿ ಆರೆಸ್ಸೆಸ್ ಪ್ರಾಂತ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಮುಖ್ಯ ಆಭಷಣ ಮಾಡುವರು. ಜಲಜಾಕ್ಷಿ ಟೀಚರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶ್ರೀ ಶಾರದಾಂಬಾ ಸೇವಾ ಸಂಘದ ಅಧ್ಯಕ್ಷ ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸುವರು. 5ರಂದು ಬೆಳಗ್ಗೆ 8.30ಕ್ಕೆ ಅಕ್ಷರಾಭ್ಯಾಸ ನಡೆಯುವುದು.
ಇಂದು ವಿವಿಧ ಸ್ಪರ್ಧೆ:
ನವರಾತ್ರಿ ಮಹೋತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳು ಸೆ. 25ರಂದು ಬೆಳಗ್ಗೆ ಭಜನಾ ಮಂದಿರದಲ್ಲಿ ಜರುಗಲಿದೆ. ಪ್ರಬಂಧ, ರಸಪ್ರಶ್ನೆ, ಶ್ರೀಮದ್ಭಗವದ್ಗೀತೆಯ ಧ್ಯಾನಶ್ಲೊಕ, ರಂಗೋಲಿ ಸ್ಪರ್ಧೆ ನಡೆಯುವುದು.
ನಾಳೆಯಿಂದ ಅಣಂಗೂರು ಮಂದಿರದಲ್ಲಿ ನವರಾತ್ರಿ ಮಹೋತ್ಸವ
0
ಸೆಪ್ಟೆಂಬರ್ 24, 2022