ಕಾಸರಗೋಡು: ಯೇಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮದಿನವಾದ ಗುರುವಾರ ತೆನೆ ಹಬ್ಬ(ಮೊಂತಿ ಫೆಸ್ತ್)ವನ್ನು ವಿವಿಧ ಧಾರ್ಮಿಕ ಕರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಈ ಸಂದರ್ಭ ಕಯ್ಯಾರು ಕ್ರಿಸ್ತ ರಾಜ ಇಗರ್ಜಿಯಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಬಲಿ ಪೂಜೆ ನೆರವೇರಿತು
ಮಂಜೇಶ್ವರ ಸ್ನೇಹಾಲಯದ ಚಾಪ್ಲಿನ್ ಫಾ. ಸಂತೋಷ್ ಮಿನೇಜಸ್ ಬಲಿ ಪೂಜೆ ನೆರವೇರಿಸಿದರು ಕಯ್ಯಾರ್ ಕ್ರಿಸ್ತರಾಜ ಇಗರ್ಜಿ ಧರ್ಮಗುರು ಫಾ. ಹ್ಯಾರಿ ಡಿ ಸೋಜ ವಿಧಿ ವಿಧಾನಕ್ಕೆ ನೇತೃತ್ವ ನೀಡಿದರು. ಮೇರಿ ಮಾತೆಯ ಜಯಂತಿಯನ್ನು ಕೌಟುಂಬಿಕ ಸಮ್ಮಿಲನದ ದಿನ, ಹೊಸ ಬೆಳೆಯ ಹಬ್ಬವಾಗಿ ಆಚರಿಸಲಾಗುತ್ತಿದೆ.
ಹಬ್ಬಕ್ಕೆ ಪೂರ್ವಭಾವಿಯಾಗಿ ಇಗರ್ಜಿಗಳಲ್ಲಿ ಒಂದು ವಾರದ ವಿಶೇಷ ಪ್ರಾರ್ಥನೆಯನ್ನು ಆಯೋಜಿಸಲಾಗುಉತ್ತಿದ್ದು, ಈ ಸಂದರ್ಭ ಮೇರಿ ಮಾತೆಗೆ (ಬಾಲೆ ಮೇರಿಯ ಮೂರ್ತಿಗೆ)ಪ್ರತಿದಿನ ಹೂವುಗಳನ್ನು ಸಮರ್ಪಿಸಿ, ಗೀತೆಗಳನ್ನು ಹಾಡುವ ಮೂಲಕ ಸ್ತುತಿಸುವ ಕಾರ್ಯ ನಡೆದುಬರುತ್ತದೆ.
ಇಗರ್ಜಿಗಳಲ್ಲಿ ಬಲಿ ಪೂಜೆ, ಹೊಸ ತೆನೆಯ ಆಶೀರ್ವಚನ ಮತ್ತು ವಿತರಣೆ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಕ್ರೈಸ್ತರಿಂದ ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಕೌಟುಂಬಿಕವಾಗಿ ಹಬ್ಬದ ಭೋಜನ ಕಾರ್ಯಕ್ರಮ ವಿಶೇಷತೆಯಾಗಿದೆ.
ಕಯ್ಯಾರು ಇಗರ್ಜಿಯಲ್ಲಿ ಹೊಸಬೆಳೆಯ ಹಬ್ಬ 'ಮೊಂತಿ ಫೆಸ್ತ್ ಸಂಭ್ರಮ '
0
ಸೆಪ್ಟೆಂಬರ್ 08, 2022