HEALTH TIPS

ರಾಜು ನಾರಾಯಣಸ್ವಾಮಿ ಅವರಿಗೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಡಾಕ್ಟರೇಟ್

         ತಿರುವನಂತಪುರ: ಕೇರಳ ಕೇಡರ್ ಐಎಎಸ್ ಅಧಿಕಾರಿ ರಾಜು ನಾರಾಯಣಸ್ವಾಮಿ ಅವರಿಗೆ ಮತ್ತೊಮ್ಮೆ ಡಾಕ್ಟರೇಟ್ ಒಲಿದುಬಂದಿದೆ.  ಸ್ವಾಮಿ ಅವರಿಗೆ ಪ್ರತಿಷ್ಠಿತ ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು ಕಾನೂನಿನಲ್ಲಿ ಡಾಕ್ಟರೇಟ್ ನೀಡಿತು. 1991 ರ ಬ್ಯಾಚ್ ಅಧಿಕಾರಿಯಾಗಿರುವ ಸ್ವಾಮಿ ಪ್ರಸ್ತುತ ಸಂಸದೀಯ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಐದು ಜಿಲ್ಲೆಗಳಲ್ಲಿ ಕಲೆಕ್ಟರ್, ಕಾಲೇಜು ಶಿಕ್ಷಣ ನಿರ್ದೇಶಕ, ಎಂಡಿ, ಮಾರ್ಕೆಟ್ ಫೆಡ್, ಕೃಷಿ ಉತ್ಪಾದನಾ ಆಯುಕ್ತ ಹಾಗೂ ಕೇಂದ್ರ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
            ಭ್ರμÁ್ಟಚಾರದ ವಿರುದ್ಧದ ಅವರ ಹೋರಾಟಕ್ಕಾಗಿ ಐಐಟಿ ಕಾನ್ಪುರ್ ಅವರಿಗೆ 2018 ರಲ್ಲಿ ಸತ್ಯೇಂದ್ರ ದುಬೆ ಸ್ಮಾರಕ ಪ್ರಶಸ್ತಿಯನ್ನು ನೀಡಿತ್ತು. 29 ಪುಸ್ತಕಗಳ ಲೇಖಕರಾದ ಸ್ವಾಮಿ ಅವರು ತಮ್ಮ ಪ್ರವಾಸ ಕಥನ ಶಾಂತಿಮಂತ್ರಂ ಮುಜಂಗುನ್ನ ಧಿವ್ವಾರೈಲ್‍ಗಾಗಿ 2003 ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಸೈಬರ್ ಕಾನೂನಿನಲ್ಲಿ ಹೋಮಿ ಭಾಭಾ ಫೆಲೋಶಿಪ್ ಪಡೆದಿದ್ದಾರೆ. ಕೆಲವು ವರ್ಷಗಳ ಹಿಂದೆ, ದೆಹಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಿಂದ ಸ್ವಾಮಿ ಅವರ ಎಲ್‍ಎಲ್‍ಎಂ ಪ್ರಥಮ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದಾರೆ ಎಂಬ ಸುದ್ದಿಯನ್ನು ರಾಷ್ಟ್ರೀಯ ಮಾಧ್ಯಮಗಳು ಬಹಳ ಪ್ರಾಮುಖ್ಯತೆಯೊಂದಿಗೆ ವರದಿ ಮಾಡಿದ್ದವು.
          ಕಳೆದ ಡಿಸೆಂಬರ್‍ನಲ್ಲಿ, ಬೌದ್ಧಿಕ ಆಸ್ತಿ ಕಾನೂನಿನಲ್ಲಿ ನಡೆಸಿದ ಸಂಶೋಧನೆಗಾಗಿ ಸ್ವಾಮಿ ಅವರಿಗೆ ಯುನೈಟೆಡ್ ಸ್ಟೇಟ್ಸ್‍ನ ಜಾರ್ಜ್ ಮೇಸನ್ ವಿಶ್ವವಿದ್ಯಾಲಯವು ಲಿಯೊನಾರ್ಡೊ ಡಾ ವಿನ್ಸಿ ಫೆಲೋಶಿಪ್ ನೀಡಿತು. ಸ್ವಾಮಿ ಅವರು ಕಾನೂನು ಮತ್ತು ತಂತ್ರಜ್ಞಾನದಲ್ಲಿ 200 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಮೂವತ್ತನಾಲ್ಕು ಬಾರಿ ಕೇಂದ್ರ ಚುನಾವಣಾ ವೀಕ್ಷಕರಾಗಿದ್ದ ಐಎಎಸ್ ಅಧಿಕಾರಿ ಎಂಬ ಅಪರೂಪದ ದಾಖಲೆಯನ್ನೂ ಸ್ವಾಮಿ ಹೊಂದಿದ್ದಾರೆ.
      ಸ್ವಾಮಿ ಅವರು ಇಡುಕ್ಕಿ ಜಿಲ್ಲಾಧಿಕಾರಿಯಾಗಿದ್ದಾಗ ಭ್ರμÁ್ಟಚಾರದ ವಿರುದ್ಧ ಹೋರಾಡಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು. ರಾಜಕುಮಾರಿ ಭೂ ವ್ಯವಹಾರದ ಕುರಿತು ಸ್ವಾಮಿ ಸಲ್ಲಿಸಿದ ವರದಿಯಿಂದಾಗಿ ಅಂದಿನ ಲೋಕೋಪಯೋಗಿ ಸಚಿವರು ರಾಜೀನಾಮೆ ನೀಡಬೇಕಾಯಿತು. 16 ರಾಜ್ಯಗಳಲ್ಲಿ ನಡೆದ 32 ಚುನಾವಣೆಗಳಲ್ಲಿ ಸ್ವಾಮಿ ಕೇಂದ್ರ ವೀಕ್ಷಕರಾಗಿದ್ದರು.     ಘಟಿಕೋತ್ಸವದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮುಖ್ಯ ಅತಿಥಿಯಾಗಿದ್ದರು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮುಕೇಶ್ ಶಾ ಮತ್ತು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಉಪಸ್ಥಿತರಿದ್ದರು.
      ದಶಕಗÀಳ ಹಿಂದೆ ಸ್ವಾಮಿ ಕಾಸರಗೋಡು ಜಿಲ್ಲಾಧಿಕಾರಿಯಾಗಿ ಜನಪರ, ಜನಪ್ರಿಯ ಸೇವೆಗೈದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad

ಜಾಹಿರಾತು

Qries