ತಿರುವನಂತಪುರ: 25 ಕೋಟಿ ಓಣಂ ಬಂಪರ್ ವಿಜೇತ ಅನುಪ್ ಅವರು ಇದೀಗ ಬಂಪರ್ ಬಂದ ಬಳಿಕ ಒಟ್ಟು ಶಾಂತಿ ಕೆಟ್ಟಿದೆ ಎಂದು ಹೇಳುವ ಮೂಲಕ ನೈಜ ಚಿತ್ರಣ ಬಹಿರಂಗಗೊಳಿಸಿದ್ದಾರೆ.
ಬೆಳಗ್ಗೆಯಿಂದಲೇ ಸಾಲ ಕೇಳುವ ಜನರಿಂದ ಮನೆ ತುಂಬಿ ತುಳುಕುತ್ತಿದ್ದು, ಅವರಿಗೆ ಹೆದರಿ ತಲೆಮರೆಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಅನೂಪ್. ಫೇಸ್ ಬುಕ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಅನೂಪ್ ಸ್ಪಷ್ಟನೆ ನೀಡಿದ್ದಾರೆ.
ಹಣ ಇನ್ನೂ ಕೈಸೇರಿಲ್ಲ ಎಂದು ಹೇಳಿದರೆ ಯಾರೂ ನಂಬುವುದಿಲ್ಲ ಎಂದು ಅನೂಪ್ ಹೇಳಿದ್ದಾರೆ. ಈಗ ತನ್ನ ಬಗ್ಗೆ ಮಾಧ್ಯಮಗಳು ಸಾಕಷ್ಟು ಸುದ್ದಿ ಹಬ್ಬಿಸಿರುವುದರಿಂದ ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಜನ ಗೇಟಿನ ಮುಂದೆ ಬಂದು ಬಡಿಯುತ್ತಿದ್ದಾರೆ. ಅದರಿಂದಾಗಿ ಈಗ ಸಂಬಂಧಿಕರ ಮನೆಯಲ್ಲಿ ವಾಸವಾಗಿರುವೆ ಎನ್ನುತ್ತಾರೆ ಶ್ರೀವಿಹಾರಂನವರಾದ ಅನುಪ್.
ಓಣಂ ಬಂಪರ್ ಒಲಿದು ಬಂದಾಗ ಅತೀವ ಸಂತಸವಿತ್ತು. ಆದರೆ ಆ ಸಂತಸ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಮನೆಯಿಂದ ಹೊರಗೆ ಕಾಲಿಡಲೂ ಆಗುತ್ತಿಲ್ಲ. ಮಗುವಿಗೆ ಆನಾರೋಗ್ಯ ಕಾಡಿದರೆ ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಜನ ಹುಡುಕಿಕೊಂಡು ಬರುತ್ತಾರೆ.
ಹಣ ಸಿಕ್ಕರೂ ತೆರಿಗೆಯ ಬಗ್ಗೆ ಏನೂ ಗೊತ್ತಿಲ್ಲ. ಯಾವುದೇ ಸಂದರ್ಭದಲ್ಲಿ, ಅದನ್ನು ಸ್ವೀಕರಿಸಿದ ಎರಡು ವರ್ಷಗಳ ನಂತರ ಮಾತ್ರ ಅದನ್ನು ಹೇಗೆ ಬಳಸಬೇಕೆಂದು ನಿರ್ಧರಿಸಲಾಗುತ್ತದೆ. ಲಕ್ಷಾಧಿಪತಿಯಾಗದಿದ್ದರೂ ಪರವಾಗಿಲ್ಲ, ಸ್ವಂತ ಮನೆಯಲ್ಲಿ ನೆಮ್ಮದಿಯಿಂದ ಇದ್ದರೆ ಸಾಕಿತ್ತು ಎನ್ನುತ್ತಾರೆ ಅನೂಪ್.
ಹುಡುಕಿಕೊಂಡು ಬಂದವರ ಅಡ್ಡಿಯಿಂದ ನೆರೆಹೊರೆಯವರೂ ಶತ್ರುಗಳಾದರು. ಇಷ್ಟು ದೊಡ್ಡ ಬಹುಮಾನ ಬರಬಾರದಿತ್ತು ಎಂದು ಈಗ ಅನಿಸುತ್ತಿದೆ ಎಂದೂ ಅನೂಪ್ ಹೇಳುತ್ತಾರೆ.
ಬಂಪರ್ ಲಾಟರಿ ಪಡೆದವನ ಪಡಿಪಾಟು ಗೊತ್ತಾ: ಮನೆ ಬಿಟ್ಟು ತಲೆಮರೆಸಬೇಕಾದ ಸ್ಥಿತ!: ಓಣಂ ಬಂಪರ್ ವಿಜೇತನ ಅಳಲು
0
ಸೆಪ್ಟೆಂಬರ್ 23, 2022