ಕಾಸರಗೋಡು: ಜಿಲ್ಲಾ ಪಂಚಾಯಿತಿ ವತಿಯಿಂದ ಓಣಂ ಹಬ್ಬದ ಆಚರಣೆ'ತಂಬೂರಿ-2022'ಕಾರ್ಯಕ್ರಮವನ್ನು ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಓಣಂ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ನಂತರ ಜಿಲ್ಲಾ ಪಂಚಾಯಿತಿ, ಅದರ ಘಟಕ ಸಂಸ್ಥೆಗಳು, ಜಿಲ್ಲಾ ಕೈಗಾರಿಕಾ ಕೇಂದ್ರ, ಸಾಕ್ಷರತಾ ಮಿಷನ್, ಜಿಲ್ಲಾ ಯುವ ಕಲ್ಯಾಣ ಮಂಡಳಿ, ಜಿಲ್ಲಾ ಎಕನಾಮಿಕ್ಸ್-ಸ್ಟ್ಯಾಟಿಸ್ಟಿಕ್ಸ್ ಆಫೀಸ್, ಎಲ್‍ಎಸ್‍ಜಿಡಿ ಮತ್ತು ಪಿಎಯು ಕಚೇರಿಗಳ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಂದ ವಿವಿಧ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು. ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾರ್ಯದರ್ಶಿ ಕೆ.ಪ್ರದೀಪನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ಎನ್.ಸರಿತಾ, ಕೆ.ಶಕುಂತಲಾ, ಶಿನೋಜ್ ಚಾಕೋ, ಸದಸ್ಯರಾದ ಎಂ.ಮನು, ಫಾತಿಮತ್ ಶಮ್ನಾ, ಗೋಲ್ಡನ್ ಅಬ್ದುಲ್ ರಹಮಾನ್, ಜಾಸ್ಮಿನ್ ಕಬೀರ್, ಜಮೀಲಾ ಸಿದ್ದಿಕ್, ಕಮಲಾಕ್ಷಿ, ಜೋಮೋನ್ ಜೋಸ್, ಜಿಲ್ಲಾ ಯೋಜನಾಧಿಕಾರಿ ಎ.ಎಸ್.ಮಾಯಾ, ಅಧೀಕ್ಷಕ ಸುರೇಶ್ ಕುಮಾರ್, ಅಧಿಕಾರಿಗಳು ವಿವಿಧ ಇಲಾಖೆಗಳು ಮತ್ತು ಜಿಲ್ಲಾ ಪಂಚಾಯತ್ ಸಿಬ್ಬಂದಿ ನೇತೃತ್ವ ವಹಿಸಿದ್ದರು.