ಕುಂಬಳೆ: ಶಿಕ್ಷಣ, ಸಾಹಿತ್ಯ, ಸಂಘಟನೆಯ ಕ್ಷೇತ್ರದ ಸೇವೆಗಾಗಿ ವಿ.ಬಿ.ಕುಳಮರ್ವ ಮತ್ತು ಲಲಿತಾ ಲಕ್ಷ್ಮೀ ಕುಳಮರ್ವ ದಂಪತಿಗೆ ಭಾರತ ದಂಪತಿ ರತ್ನ ಗೌರವವನ್ನು ಉಡುಪಿ ಅಂಬಲಪಾಡಿ ದೇವಾಲಯದ ಭವಾನಿ ಮಂಟಪದಲ್ಲಿ ನಡೆದ ಕರ್ನಾಟಕ ಮಕ್ಕಳ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.
ಪ್ರಧಾನಮಂತ್ರಿ ಬಾಲ ಪುರಸ್ಕಾರ ಪಡೆದ ರೆಮೋನಾ ಇವೆಟ್ ಪಿರೇರ ಸಹಿತ ಪ್ರತಿಭಾನ್ವಿತ ಮಕ್ಕಳ ಮೂಲಕ ಗುರು ಗೌರವ ಪರಿಕ್ರಮ ಪ್ರಶಂಸೆಗೆ ಪಾತ್ರವಾಯಿತು. ಆರಾಧನಾ ಭಟ್, ಭಕ್ತಿಶ್ರೀ ಆಚಾರ್ಯ, ಶ್ರಜನ್ಯ ಜೆ ಕೋಟ್ಯಾನ್, ಯೋಗ ರತ್ನ ತನುಶ್ರೀ ಪಿತ್ರೋಡಿ, ತನುಶ್ರೀ ಮಂಗಳೂರು, ಡ್ರಾಮ ಜೂನಿಯರ್ ಈ ವರ್ಷದ ಮೊದಲ 3 ಮಂದಿ ವಿಜೇತರಾದ ಸಮೃದ್ಧಿ ಕುಂದಾಪುರ, ಸಾನ್ನಿಧ್ಯ ಪೆರ್ಡೂರು, ವೇದಿಕ್ ಕೌಶಲ್, ಕರುಣಾ ಸುರೇಶ ಪೈ, ವಿಶ್ವನಾಥ ಶೆಣೈ ಮತ್ತು ಸಂಘಟಕ ಡಾ.ಶೇಖರ ಅಜೆಕಾರು ಮೊದಲಾದವರು ಉಪಸ್ಥಿತರಿದ್ದರು. ನಿವೃತ್ತಿಯ ಬಳಿಕವೂ ನಮ್ಮ ಸೇವೆಯನ್ನು ಗುರುತಿಸಿ ಗೌರವ ನೀಡುತ್ತಿರುವುದು ಇನ್ನಷ್ಟು ಸೇವೆ ಮಾಡಲು ಸ್ಪೂರ್ತಿ ತುಂಬಿದೆ ಎಂದು ವಿ.ಬಿ.ಕುಳಮರ್ವ ಹೇಳಿದರು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ವಿಭಾಗದ ಸುನಿಧಿ ಅಜೆಕಾರು ವಂದಿಸಿದರು.
ಕುಳಮರ್ವ ದಂಪತಿಗೆ ಉಡುಪಿಯಲ್ಲಿ ಪ್ರಶಸ್ತಿ
0
ಸೆಪ್ಟೆಂಬರ್ 11, 2022