ಬದಿಯಡ್ಕ: ಬದಿಯಡ್ಕದ ದಶಮಾನೋತ್ತರ ಸಂಸ್ಥೆ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳಿಂದ ಚೌತಿ ಹಬ್ಬದ ಸಂದರ್ಭದಲ್ಲಿ ಸೂರಂಬೈಲಿನ ಶ್ರೀ ಗಣೇಶ್ ಮಂದಿರದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು. ಸವ್ಯಸಾಚಿ ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಅವರ ನಿರ್ದೇಶನದಲ್ಲಿ ಮೀನಾಕ್ಷಿ ಕಲ್ಯಾಣ ಮತ್ತು ಅಂಧಕಾಸುರ ಮೋಕ್ಷ ಪ್ರಸಂಗ ಪ್ರದರ್ಶಿಸಲಾಯಿತು.
ಪಾತ್ರವರ್ಗದಲ್ಲಿ ಮೀನಾಕ್ಷಿಯಾಗಿ ಅಭಿಜ್ಞ ಭಟ್ ಬೊಳುಂಬು, ಪದ್ಮಗಂಧಿನಿಯಾಗಿ ವರ್ಷ ಲಕ್ಷ್ಮಣ್, ಶೂರಸೇನನಾಗಿ ಮನ್ವಿತ್ ನಾರಾಯಣಮಂಗಲ, ನಾರದ ಮತ್ತು ಶಿವನಾಗಿ ಮೇಘನಾ ಕುಡಾಣ, ಮಂತ್ರಿ ಮತ್ತು ಅಂಧಕಾಸುರನಾಗಿ ಡಾ.ಶ್ರೀಶ ಕುಮಾರ ಪಂಜಿತ್ತಡ್ಕ, ವಿಷ್ಣುವಾಗಿ ಉಪಾಸನಾ ಪಂಜರಿಕೆ, ಶಿವನಾಗಿ ನಂದಕಿಶೋರ ಮವ್ವಾರು, ಶಚಿಯಾಗಿ ಮನಸ್ವಿನಿ ನಾರಾಯಣಮಂಗಲ, ಶಿವಗಣಗಳಾಗಿ ಅಕ್ಷಿತ್, ದೀಕ್ಷಿತ್, ಮನೀಶ್, ಶ್ರೀವಿದ್ಯಾ, ಮನೀಶ್ ಜಿ ಪಿ, ತನ್ಮಯ್ ಹಾಗೂ ವಿಷ್ಣು ಇವರು ಪಾತ್ರಗಳಿಗೆ ಜೀವತುಂಬಿದರು. ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಕಲ್ಲೂರಾಯ ರಂಜಿಸಿದರು. ಚೆಂಡೆ ಮದ್ದಳೆಗಳಲ್ಲಿ ಶಿವಶಂಕರ ಭಟ್ ಅಂಬೆಮೂಲೆ ಮತ್ತು ಗೋಪಾಲಕೃಷ್ಣ ನಾವಡ ಮಧೂರು ಕೈಚಳಕತೋರಿದರು. ನೇಪಥ್ಯದಲ್ಲಿ ಕೇಶವ ಕಿನ್ಯ, ರಾಜೇಂದ್ಫ್ರ ವಾಂತಿಚ್ಚಾಲು ಹಾಗೂ ಗಿರೀಶ್ ಕುಂಪಲ ಸಹಕರಿಸಿದರು.