ಕಾಸರಗೋಡು: ಕುಟುಂಬಶ್ರೀ ಯಲ್ಲಿ ಇನ್ನೂ ಸದಸ್ಯರಾಗಲು ಬಾಕಿಯಿರುವ ಜಿಲ್ಲೆಯ ಮಹಿಳೆಯರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ 'ಸದೃಢ'ಯೋಜನೆ ಜಾರಿಗೆ ಬರಲಿದೆ. ವಿವಿಧ ಕಾರಣಗಳಿಂದ ಕುಟುಂಬಶ್ರೀ ಸದಸ್ಯರಾಗಲು ಸಾಧ್ಯವಾಗದ ಮಹಿಳೆಯರು ಮತ್ತು ಹೊಸದಾಗಿ ಸದಸ್ಯರಾಗಲು ಇಚ್ಛಿಸುವ ಮಹಿಳೆಯರು ಸದೃಢ ಯೋಜನೆಯ ಮೂಲಕ ಸದಸ್ಯರಾಗಬಹುದಾಗಿದೆ. ಅಭಿಯಾನದ ಮೂಲಕ ಎಲ್ಲಾ ಸಿಡಿಎಸ್ ಗಳಲ್ಲಿ ಹೊಸ ನೆರೆಕರೆ ಒಕ್ಕೂಟಗಳನ್ನು ರಚಿಸುವುದರ ಜತೆಗೆ ಸಮಾಜದಲ್ಲಿ ಪ್ರತ್ಯೇಕವಾಗಿರುವ ಜನರನ್ನು ಒಂದು ಗೂಡಿಸುವ ಗುರಿಯನ್ನು ಹೊಂದಿದೆ. ಕುಟುಂಬಶ್ರೀ ರಜತ ಮಹೋತ್ಸವ ಆಚರಣೆಯ ಭಾಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತದೆ. ಇದರ ಅಂಗವಾಗಿ ಜಿಲ್ಲೆಯಲ್ಲಿ ಎರಡು ವಾರಗಳ ಸದೃಢ ಯೋಜನೆಯನ್ನು ನಡೆಸಲಾಗುತ್ತದೆ.
ಸದೃಢ ಯೋಜನೆಯ ಅಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕರ ನೇತೃತ್ವದಲ್ಲಿ ಸಮಾಲೋಚನಾ ಸಭೆ ಹಾಗೂ ಸಿಡಿಎಸ್ ಸಭೆ ನಡೆಸಲಾಯಿತು. ಸಿಡಿಎಸ್ ಮತ್ತು ಎಡಿಎಸ್ ಮೂಲಕ ಎಲ್ಲಾ ಸಿಡಿಎಸ್ ಗಳಲ್ಲಿ 15 ದಿನಗಳ ಪ್ರಚಾರವನ್ನು ನಡೆಸಲಾಗುವುದು. ಅಕ್ಟೋಬರ್ 2ರೊಳಗೆ ಅಭಿಯಾನ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕುಟುಂಬಶ್ರೀ ಸದಸ್ಯರಾಗಲು ಸದೃಢ ಯೋಜನೆ
0
ಸೆಪ್ಟೆಂಬರ್ 23, 2022