ನವದೆಹಲಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಾಯಕಿ ನಂಜಿಯಮ್ಮ ಕೇರಳೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನಂಜಿಯಮ್ಮ ನಿನ್ನೆ ಅತ್ಯುತ್ತಮ ಗಾಯಕಿ ಪ್ರಶಸ್ತಿ ಸ್ವೀಕರಿಸಿದರು. ಇಡೀ ಸಭಿಕರು ಎದ್ದು ನಿಂತು ನಂಜಿಯಮ್ಮ ಅವರನ್ನು ಶ್ಲಾಘಿಸಿದರು.
ವನವಾಸಿ ಸಮುದಾಯದ ರಾಷ್ಟ್ರಪತಿಗಳು ವನವಾಸಿ ಸಮುದಾಯದ ಬುಡಕಟ್ಟು ಡೋಲು ಕಲಾವಿದೆಯಾದ ನಂಜಿಯಮ್ಮ ಅವರಿಗೆ ಮನ್ನಣೆ ನೀಡಿದ ಐತಿಹಾಸಿಕ ಕ್ಷಣಕ್ಕೆ ಪ್ರಶಸ್ತಿ ವಿತರಣಾ ವೇದಿಕೆ ಸಾಕ್ಷಿಯಾಯಿತು. ವೇದಿಕೆಯಲ್ಲಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಎಲ್ ಮುರುಗನ್ ಉಪಸ್ಥಿತರಿದ್ದರು. ನಂಜಿಯಮ್ಮ ಸ್ವಾಭಾವಿಕವಾಗಿ ನಗುನಗುತ್ತಲೇ ಪ್ರಶಸ್ತಿ ಸ್ವೀಕರಿಸಿದರು.
ಜೇಕ್ಸ್ ಬಿಜೋಯ್ ನಿರ್ದೇಶನದ ಅಯ್ಯಪ್ಪನುಂ ಕೊಶಿಯುಂ ಚಿತ್ರದಲ್ಲಿ ಜಾನಪದ ಗೀತೆಗಳನ್ನು ಹಾಡಿದ್ದಕ್ಕಾಗಿ ನಾಂಚಿಯಮ್ಮ ಪ್ರಶಸ್ತಿಗೆ ಅರ್ಹರಾಗಿದ್ದರು. ಅಯ್ಯಪ್ಪನುಂ ಕೊಶಿಯುಂ ಚಿತ್ರದಲ್ಲಿ ಎಸ್‍ಐ ಅಯ್ಯಪ್ಪನ್ ನಾಯರ್ ಪಾತ್ರದಲ್ಲಿ ನಟಿಸಿದ್ದ ಬಿಜು ಮೆನನ್ ಅತ್ಯುತ್ತಮ ಪೆÇೀಷಕ ನಟ ಪ್ರಶಸ್ತಿಯನ್ನೂ ಪಡೆದರು.
ರಾಷ್ಟ್ರಪತಿಗಳಿಂದ ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಿದ ನಂಜಿಯಮ್ಮ: ಐತಿಹಾಸಿಕ ಕ್ಷಣಗಳೆಂದ ಅಭಿಮಾನಿಗಳು
0
ಸೆಪ್ಟೆಂಬರ್ 30, 2022
Tags