ತಿರುವನಂತಪುರ: ವಕ್ಫ್ ಕಾನೂನು ತಿದ್ದುಪಡಿ ಮಸೂದೆಗೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅಂಕಿತ ಹಾಕಿದ್ದಾರೆ. ವಕ್ಪ್ ಕಾಯ್ದೆಯನ್ನು ಪಿಎಸ್‍ಸಿಗೆ ಹಸ್ತಾಂತರಿಸುವ ನಿರ್ಧಾರವನ್ನು ರದ್ದುಗೊಳಿಸುವ ಮಸೂದೆಗೆ ಅನುಮೋದನೆ ನೀಡಲಾಗಿದೆ.
ಕಳೆದ ವಿಧಾನಮಂಡಲದ ಅಧಿವೇಶನದಲ್ಲಿ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ವಕ್ಫ್ ನೇಮಕಾತಿಯನ್ನು ಪಿಎಸ್‍ಸಿಗೆ ವಹಿಸುವ ನಿರ್ಧಾರದ ವಿರುದ್ಧ ಮುಸ್ಲಿಂ ಲೀಗ್, ಸಮಸ್ತ ಸೇರಿದಂತೆ ಸಂಘಟನೆಗಳು ಮುಂದಾಗಿದ್ದವು. ನೇಮಕಾತಿಗಳನ್ನು ಪಿಎಸ್‍ಸಿಗೆ ಬಿಟ್ಟರೆ ಅದು ವಕ್ಫ್ ಮಂಡಳಿಯ ಉದ್ದೇಶಗಳನ್ನು ವಿಫಲಗೊಳಿಸುತ್ತದೆ ಎಂದು ವಾದಿಸಲಾಯಿತು. ಇದರ ವಿರುದ್ಧ ಮಸೂದೆ ಮಂಡಿಸಲಾಗಿತ್ತು. ಅದನ್ನು ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ವಕ್ಫ್ ತಿದ್ದುಪಡಿ ಮಸೂದೆಗೆ ರಾಜ್ಯಪಾಲರಿಂದ ಅಂಕಿತ
0
ಸೆಪ್ಟೆಂಬರ್ 16, 2022