HEALTH TIPS

ಚೀನಿ ಲೋನ್ ಆಯಪ್‌ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಪೇಟಿಎಂ ಮೇಲೆ ಮತ್ತೆ ಇಡಿ ದಾಳಿ

 

              ನವದೆಹಲಿ: ಚೀನಿ ಲೋನ್ ಆಯಪ್‌ಗಳ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಡಿಜಿಟಲ್ ಪಾವತಿ ಕಂಪನಿಗಳಾದ ಪೇಟಿಎಂ ಮತ್ತು ಪೇಯು ಮೇಲೆ ಮತ್ತೆ ದಾಳಿ ನಡೆಸಿದೆ.

             ಸೆ.3 ರಂದು ಬೆಂಗಳೂರಿನಲ್ಲಿ ಪೇಟಿಎಂ, ರೋಜರ್ ಪೇ, ಕ್ಯಾಶ್‌ಫ್ರೀಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇ.ಡಿ ದಾಳಿ ನಡೆಸಿತ್ತು.

                     ಇದರ ಮುಂದುವರೆದ ಭಾಗವಾಗಿ ಬುಧವಾರ ಮೆಟ್ರೊ ನಗರಳಲ್ಲಿರುವ ಪೇಟಿಎಂ, ಪೇಯು ಕಂಪನಿಗಳ ಮುಂಬೈ, ದೆಹಲಿ, ಗುರುಗ್ರಾಮ, ಲಕನೌ ಹಾಗೂ ಕೋಲ್ಕತ್ತಗಳಲ್ಲಿನ ಕಚೇರಿಗಲ್ಲಿ ತಪಾಸಣೆ ನಡೆದಿದೆ. ತಪಾಸಣೆ ಮುಂದುವರೆದಿದ್ದು, ಈ ಕಾರ್ಯಾಚರಣೆಯ ಮಾಹಿತಿಯನ್ನು ಇ.ಡಿ ಇನ್ನೂ ಒದಗಿಸಿಲ್ಲ. ಈ ದಾಳಿಯನ್ನು ಪೇಟಿಎಂ ಖಚಿತಪಡಿಸಿದ್ದು, ಬೆಂಗಳೂರಿನಲ್ಲಿ ಆರಂಭಿಸಲಾದ ವಿಚಾರಣೆ ಭಾಗವಾಗಿ ಇದು ನಡೆದಿದೆ ಎಂದು ಪಿಟಿಐಗೆ ತಿಳಿಸಿದೆ.

               ಪೇಟಿಎಂ ಅಕೌಂಟ್‌ನಲ್ಲಿರುವ ಕೆಲ ವ್ಯಕ್ತಿಗಳ ಹಣವನ್ನು ತಡೆಹಿಡಿಯಲು ಇ.ಡಿ ಕೋರಿದೆ ಎಂದು ಪೇಟಿಎಂ ತಿಳಿಸಿದೆ.

                  ಮೊಬೈಲ್ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರ ಸುಲಿಗೆ ಮತ್ತು ಕಿರುಕುಳ ನೀಡುವುದರಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಘಟಕಗಳು, ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸ್ ಸೈಬರ್ ಕ್ರೈಂ ಠಾಣೆಯಲ್ಲಿ ಕನಿಷ್ಠ 18 ಎಫ್‌ಐಆರ್‌ಗಳು ದಾಖಲಾಗಿದ್ದು.

                  ದೇಶದ ವಿವಿಧ ನಗರಗಳ ಸೈಬರ್ ಕ್ರೈಂ ಠಾಣೆಗಳಲ್ಲೂ ದೂರು ದಾಖಲಾಗಿದ್ದವು. ಅವುಗಳನ್ನು ಆಧರಿಸಿ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

                   ಬೆಂಗಳೂರಿನ ದಾಳಿ ವೇಳೆ, ತನಿಖಾ ಸಂಸ್ಥೆಯು ಚೀನೀ ವ್ಯಕ್ತಿಗಳು ನಿಯಂತ್ರಿಸಲ್ಪಡುತ್ತಿದ್ದ ಈ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ ₹ 17 ಕೋಟಿ ಹಣವನ್ನು ವಶಪಡಿಸಿಕೊಂಡಿದೆ ಎಂದು ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries