ಕಾಸರಗೋಡು: ಓಣಂ ಹಬ್ಬದ ಅಂಗವಾಗಿ ಜಿಲ್ಲೆಯ ಖಜಾನೆ ನೌಕರರು ಭಾನುವಾರವೂ ಚಟುವಟಿಕೆ ನಿರತರಾಗಿದ್ದರು. ನೌಕರರು ರಜೆಯ ಆಲಸ್ಯ ತೊರೆದು ಪಿಂಚಣಿ, ಬೋನಸ್, ನೌಕರರ ಮುಂಗಡ, ಬಿಲ್ ಇತ್ಯಾದಿಗಳನ್ನು ತುರ್ತಾಗಿ ಮಾಡಿಮುಗಿಸುವುದರ ಜತೆಗೆ ಮುಂಗಡ ಮೊತ್ತವನ್ನು ಕೇಳುವ ಉದ್ಯೋಗಿಗಳಿಗೆ 1ನೇ ಓಣಂ ಮೊದಲು ಈ ಮೊತ್ತ ವಿತರಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಜಿಲ್ಲಾ ಖಜಾನೆ ಸೇರಿದಂತೆ ಜಿಲ್ಲೆಯ ಎಲ್ಲ 8 ಖಜಾನೆಗಳು ಭಾನುವಾರ ಕಾರ್ಯನಿರ್ವಹಿಸಿತು.
ರೇಶನ್ ಅಂಗಡಿಗಳೂ ಓಪನ್:
ಓಣಂ ಅಂಗವಾಗಿ ಭಾನುವಾರವೂ ಪಡಿತರ ಅಂಗಡಿಗಳು ತೆರೆದು ಕಾರ್ಯಾಚರಿಸಿತು. ತುರ್ತಾಗಿ ಕಿಟ್‍ಗಳ ವಿತರಣೆಯನ್ನು ಪೂರ್ಣಗೊಳಿಸಬೇಕಾಗಿರುವುದರಿಂದ ಪಡಿತರ ಅಂಗಡಿಗಳನ್ನು ತೆರೆಯಲಾಗಿದ್ದು, ಬದಲಾಗಿ ಸೆಪ್ಟೆಂಬರ್ 19 ರಂದು ಪಡಿತರ ಅಂಗಡಿಗಳನ್ನು ಮುಚ್ಚಲಾಗುವುದು.
ಭಾನುವಾರದ ರಜೆಯಲ್ಲೂ ಕಾರ್ಯನಿರ್ವಹಿಸಿದ ಜಿಲ್ಲಾಖಜಾನೆ, ರೇಶನ್ ಅಂಗಡಿ
0
ಸೆಪ್ಟೆಂಬರ್ 05, 2022