ಕಾಸರಗೋಡು: ವಿದ್ಯಾನಗರದಲ್ಲಿನ ಕಾಸರಗೋಡು ಸರ್ಕಾರಿ ಕಾಲೇಜ್ ನಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಕೆಲವೊಂದು ಮೀಸಲಾತಿ ಸೀಟುಗಳು ತೆರವಾಗಿದೆ. ಪರಿಶಿಷ್ಠ ಜಾತಿ ವಿದ್ಯಾರ್ಥಿಗಳಿಗೆ ಎಂ.ಎ ಅರೆಬಿಕ್ (2), ಎಂ.ಎಸ್ಸಿ. ರಾಸಾಯನ ಶಾಸ್ತ್ರ (1), ಎಂ.ಎಸ್ಸಿ.ಗಣಿತ ಶಾಸ್ತ್ರ (2), ಎಂ.ಎಸ್ಸಿ. ಭೂಮಿ ಶಾಸ್ತ್ರ (1) ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ, ಎಂ. ಎಸ್ಸಿ.ಗಣಿತ ಶಾಸ್ತ್ರ ದಲ್ಲಿ (1) ಸೀಟು ತೆರವಾಗಿದೆ. ವಿದ್ಯಾರ್ಥಿಗಳು ತಮ್ಮ ಅರ್ಹತೆಯನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳೊಂದಿಗೆ ಸೆಪ್ಟೆಂಬರ್ 27 ರಂದು ಬೆಳಿಗ್ಗೆ 10.30 ಕ್ಕೆ ಪ್ರಾಂಶುಪಾಲರ ಕಚೇರಿಯಲ್ಲಿ ಹಾಜರಾಗಬಹುದಗಿದೆ.
ಮುಳ್ಳೇರಿಯ ಸನಿಹದ ನೆಟ್ಟಣಿಗೆ ಬಜ ಮಾದರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿಎ ಇಂಗ್ಲಿಷ್, ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ಬಿಕಾಂ ಎಂಬೀ ಪದವಿ ವಿಷಯಗಳಲ್ಲಿ ಸೀಟುಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 26 ರೊಳಗೆ ಕಾಲೇಜು ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(9497264992)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಕಾಸರಗೋಡು ವಿವಿಧ ಕಾಲೇಜುಗಳಲ್ಲಿ ಸೀಟುಗಳ ತೆರವು
0
ಸೆಪ್ಟೆಂಬರ್ 25, 2022
Tags