ಪೆರ್ಲ: ಶಾಲೆಯ ಉನ್ನತಿಯು ಅಲ್ಲಿನ ಶಿಕ್ಷಕರ ಕೈಯಲ್ಲಿದೆ. ಅಧ್ಯಾಪಕರೂ ಒಂದರ್ಥದಲ್ಲಿ ವಿದ್ಯಾರ್ಥಿಗಳೇ ಆಗಿದ್ದಾರೆ. ಅವರು ನಿರಂತರವಾಗಿ ಅಧ್ಯಯನವನ್ನು ಮಾಡಬೇಕು. ಅಂಥ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಮಾತ್ರ ವಿದ್ಯಾ ಸಂಸ್ಥೆಯ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಪ್ರಾಂಶುಪಾಲ ರವೀಂದ್ರನಾಥ ನಾಯಕ್ ಹೇಳಿದರು.
ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಕನ್ನಡ ಶಿಕ್ಷಕ ಸುಭಾμï ಪಟ್ಟಾಜೆ ಮತ್ತು ಗಣಿತ ಶಾಸ್ತ್ರದ ಶಿಕ್ಷಕ ಅನೀಶ್ ಕುಮಾರ್ ಪಿ. ಆರ್ ಅವರಿಗೆ ಶೇಣಿ ಶಾರದಾಂಬಾ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಗುಣವನ್ನು ಹೊಂದಿದ ಇವರ ಸಾಧನೆಗೆ ಡಾಕ್ಟರೇಟ್ ಪದವಿಯು ದೊರಕಿದ್ದು ನಮ್ಮೆಲ್ಲರ ಪಾಲಿಗೆ ಹೆಮ್ಮೆಯ ವಿಚಾರ. ಇದು ಇವರ ನಿರಂತರ ತಪಸ್ಸಿನ ಫಲ. ಸಾಧನೆಯ ಹಾದಿಯಲ್ಲಿ ಎದುರಾಗುವ ಸವಾಲು ಮತ್ತು ಎಡರು ತೊಡರುಗಳನ್ನು ಎದುರಿಸಿ ಇವರು ತಮ್ಮ ಗುರಿಯನ್ನು ತಲುಪಿದ್ದಾರೆ. ಇವರ ಜೈತ್ರಯಾತ್ರೆಯು ಹೀಗೆಯೇ ಮುಂದುವರಿಯಲಿ ಎಂದು ಅವರು ಅಭಿಪ್ರಾಯ ಪಟ್ಟರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಯ್ದೀನ್ ಕುಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಹಿರಿಯ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಜೆ. ಎಸ್, ಪ್ರೌಢ ಶಾಲೆಯ ಕನ್ನಡ ಶಿಕ್ಷಕ ಶ್ಯಾಮ ಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು. ರಸಾಯನ ಶಾಸ್ತ್ರ ಶಿಕ್ಷಕ ಸಂತೋμï ಕುಮಾರ್ ಕ್ರಾಸ್ತ ನಿರೂಪಿಸಿದರು. ಆಂಗ್ಲ ಭಾμÁ ಶಿಕ್ಷಕ ಶಾಸ್ತ ಕುಮಾರ್ ಸ್ವಾಗತಿಸಿ ಅನೀಶ್ ಕುಮಾರ್ ಪಿ. ಆರ್ ವಂದಿಸಿದರು.
ಡಾಕ್ಟರೇಟ್ ಪಡೆದ ಸಾಧಕರಿಗೆ ಅಭಿನಂದನೆ
0
ಸೆಪ್ಟೆಂಬರ್ 03, 2022