HEALTH TIPS

'ಪಾಪ್ಯುಲರ್ ಫ್ರಂಟ್ ಯೋಜಿತ ದಾಳಿ ನಡೆಸಿತು, ಹಲವರು ಮುಸುಕು ಧರಿಸಿ ಬಂದಿದ್ದರು': ಹರತಾಳ ವಿರುದ್ಧ ಕೊನೆಗೂ ಮಾತಾಡಿದ ಮುಖ್ಯಮಂತ್ರಿ


           ತಿರುವನಂತಪುರ: ಹರತಾಳ ನೆಪದಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯದಲ್ಲಿ ಯೋಜಿತ ದಾಳಿ ನಡೆಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊನೆಗೂ ಹೇಳಿಕೆ ನೀಡಿದ್ದಾರೆ.  ಸಂಘಟನೆಯ ಕಡೆಯಿಂದ ಆಕ್ರಮಣಕಾರಿ ಹಸ್ತಕ್ಷೇಪವನ್ನು ಆಯೋಜಿಸಲಾಗಿತ್ತು. ಹಿಂಸಾಚಾರವನ್ನು ನಿಭಾಯಿಸುವಲ್ಲಿ ಪೆÇಲೀಸರು ಶ್ಲಾಘನೀಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಪೆÇಲೀಸರ ಕಡೆಯಿಂದ ಕಠಿಣ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
          ಹರತಾಳಕ್ಕೆ ಸಂಬಂಧಿಸಿದಂತೆ ನಿನ್ನೆ ಕೆಲವರನ್ನು ಬಂಧಿಸಲಾಗಿದೆ. ಇನ್ನೂ ಹಲವು ಮಂದಿಯನ್ನು ಬಂಧಿಸಬೇಕಿದೆ. ಹಲವರು ಮುಖ ಮರೆಮಾಚಿ, ಕವಚ ಧರಿಸಿ ಬಂದಿದ್ದರು. ಪೆÇೀಲೀಸರ ಮುಂದಿನ ಕ್ರಮದಲ್ಲಿ ಅವರನ್ನೂ ಪತ್ತೆಮಾಡಲಾಗುವುದು.  ತಪ್ಪಿಸಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
            ಪಾಪ್ಯುಲರ್ ಫ್ರಂಟ್ ನಡೆಸಿದ ಹರತಾಳದಿಂದ ರಾಜ್ಯದ ವಿವಿಧೆಡೆ ಸಾಕಷ್ಟು ಹಾನಿಯಾಗಿದೆ. ಅನೇಕ ಜನರು ಗಾಯಗೊಂಡರು. ವೈದ್ಯರೂ,ಪೋಲೀಸರೂ  ಗಾಯಗೊಂಡಿದ್ದಾರೆ. ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯದ ಹಿಂಸಾಚಾರದ ವ್ಯಾಪಕ ಘಟನೆಗಳು ನಡೆಯುತ್ತಿವೆ. ಬಸ್‍ಗಳ ಮೇಲೂ ದಾಳಿ ನಡೆಸಲಾಗಿದೆ. ಹರತಾಳ ದಿನ ನಡೆದ ಕುಕೃತ್ಯಗಳು ಖಂಡನೀಯ ಎಂದು  ಹಿರಿಯ ಪೆÇಲೀಸ್ ಅಧಿಕಾರಿಗಳ ಸಂಘದ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಇಂತಹ ಕ್ರಮಗಳನ್ನು ಪೆÇ್ರೀತ್ಸಾಹಿಸಲಾಗದು ಎಂದರು.

         ಕೇರಳ ಕೋಮುವಾದದ ನಾಡಲ್ಲ. ಆದರೆ, ಕೇರಳದಲ್ಲೂ ಕೋಮುವಾದವನ್ನು ಉತ್ತೇಜಿಸುವ ಜನರಿದ್ದಾರೆ. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೋಮುವಾದಿ ಶಕ್ತಿಗಳೊಂದಿಗೆ ಸೆಣಸಲಾಗುವುದು. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದವನ್ನು ಸಮಾನವಾಗಿ ಎದುರಿಸಬೇಕು. ಕೋಮುವಾದಿ ಮತ್ತು ಭಯೋತ್ಪಾದಕ ಶಕ್ತಿಗಳು ರಾಷ್ಟ್ರವನ್ನು ಒಂದುಗೂಡಿಸಲು ಸಾಧ್ಯವಿಲ್ಲ. ಅದಕ್ಕೆ ಮಾತಿನಲ್ಲಿಯೂ, ದೃಷ್ಟಿಯಲ್ಲಿಯೂ ಬೆಂಬಲ ನೀಡಬಾರದು ಎಂದು ಮುಖ್ಯಮಂತ್ರಿ ಹೇಳಿದರು.
          ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಯೋಜಿಸಿದ್ದ ಹರತಾಳವನ್ನು ತಿರಸ್ಕರಿಸಿ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಕೂಡಾ ಖಂಡಿಸಿರುವರು. ಹರತಾಳದ ನೆಪದಲ್ಲಿ ನಡೆಯುವ ಹಿಂಸಾಚಾರವನ್ನು ಯಾವುದೇ ಸಂದರ್ಭದಲ್ಲೂ ಒಪ್ಪಲು ಸಾಧ್ಯವಿಲ್ಲ. ಕೆಎಸ್‍ಆರ್‍ಟಿಸಿ ಬಸ್‍ಗಳ ಧ್ವಂಸ ಸೇರಿದಂತೆ ಹರತಾಳದ ವೇಳೆ ಹಿಂಸಾಚಾರ ನಡೆದರೂ ಪೆÇಲೀಸರಲ್ಲಿ ಮೌನ ಆವರಿಸಿತ್ತು. ಡಿಜಿಪಿ ಹೇಳಿಕೆ ಬಿಟ್ಟರೆ ಜನ ಸಾಮಾನ್ಯರನ್ನು ದಾಳಿಕೋರರಿಂದ ರಕ್ಷಿಸಲು ಪೆÇಲೀಸರು ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ ಎಂದು ವಿ.ಡಿ.ಸತೀಶನ್ ಹೇಳಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries