ತಿರುವನಂತಪುರ: ಡ್ರಗ್ಸ್ ಸಾಮಾಜಿಕ ವಿಪತ್ತಾಗಿ ಪರಿಣಮಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಾದಕ ದ್ರವ್ಯ ಸೇವನೆಯಿಂದ ರಾಜ್ಯದ ಶಾಂತಿ ಹಾಳಾಗುತ್ತಿದೆ. ಮಾದಕ ವ್ಯಸನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಾದಕ ವ್ಯಸನದ ವಿರುದ್ಧ ಬಲಿಷ್ಠ ರಕ್ಷಣೆಯಾಗಬೇಕಿದೆ ಎಂದರು.
ಯುವಜನತೆಯಲ್ಲಿ ಮಾದಕ ದ್ರವ್ಯ ಸೇವನೆ ಹೆಚ್ಚಾಗುತ್ತಿದೆ, ಮಾದಕ ದ್ರವ್ಯ ಸೇವನೆಯ ನಂತರ ಅಪರಾಧ ಚಟುವಟಿಕೆಗಳು ಸಹ ಹೆಚ್ಚಾಗುತ್ತಿವೆ ಮತ್ತು ರಾಜ್ಯದ ಹೊರಗೆ ಮಾದಕವಸ್ತು ಉತ್ಪಾದನೆಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.
ದೊಡ್ಡ ಮಟ್ಟದಲ್ಲಿ ವ್ಯಸನ ಜಾಲ ಹರಡಿಕೊಂಡಿದೆ. ಇದು ಅಪಾಯಕ್ಕೆ ಕರೆದೊಯ್ಯುತ್ತಿದೆ. ಪೋಲೀಸರು ಮತ್ತು ಅಬಕಾರಿ ಇಲಾಖೆ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಡ್ರಗ್ಸ್ ಹರಡುವುದನ್ನು ತಡೆಯಲು ಲೋಪದೋಷ ತಡೆ ಅಗತ್ಯ.ಇದಕ್ಕಾಗಿ ಅಕ್ಟೋಬರ್ 2ರಂದು ಕ್ರಿಯಾ ಯೋಜನೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದರು.
ಬೆಳೆಯುತ್ತಿರುವ ಪೀಳಿಗೆಯ ಕೈಯಲ್ಲಿ ರಾಜ್ಯದ ಭವಿಷ್ಯ ಅಡಗಿದೆ. ಯುವಕರು ಯೋಜನೆಯ ಭಾಗವಾಗಬೇಕು. ರಾಜ್ಯ, ಜಿಲ್ಲೆ, ಸ್ಥಳೀಯ ಹಾಗೂ ಶಾಲಾ ಮಟ್ಟದಲ್ಲಿ ಮಾದಕ ವಸ್ತು ವಿರೋಧಿ ಸಮಿತಿಗಳು ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿ ಕೆಲಸ ಮಾಡಲಿದೆ. ಅಕ್ಟೋಬರ್ 2 ರಿಂದ ನವೆಂಬರ್ 2 ರವರೆಗೆ ತೀವ್ರತರವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಒಂದು ತಿಂಗಳ ಕಾಲ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಕೇರಳ ರಾಜ್ಯೋತ್ಸವ ದಿನದಂದು ಶಾಲೆಗಳಲ್ಲಿ ಮಾದಕ ದ್ರವ್ಯ ವಿರೋಧಿ ಸರಪಳಿ ಹಾಕಲಾಗುವುದು ಮತ್ತು ಸಾಂಕೇತಿಕವಾಗಿ ಅಮಲು ಪದಾರ್ಥಗಳನ್ನು ಸುಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಜನಸಂದಣಿ ಇರುವ ಕಡೆ ಸಾರ್ವಜನಿಕ ನಿಗಾ ವಹಿಸಲಾಗುವುದು. ವಾಣಿಜ್ಯ ಸಂಸ್ಥೆಗಳಲ್ಲಿ ಅಮಲು ಪದಾರ್ಥಗಳನ್ನು ಮಾರಾಟ ಮಾಡದಂತೆ ಬೋರ್ಡ್ ಹಾಕಬೇಕು,ಶಾಲಾ ಆವರಣದಲ್ಲಿನ ಅಂಗಡಿಗಳಲ್ಲಿ ಮದ್ಯಪಾನ ನಿμÉೀಧ ಮಾಡಲಾಗುವುದು,ಇಲ್ಲಿ ತಪಾಸಣೆಯನ್ನು ಬಲಪಡಿಸಿ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ರಾಜ್ಯಾದ್ಯಂತ ಜನ ಜಾಗೃತಿ, ಮಾಹಿತಿ ನೀಡಲು ಅವರು ಹೇಳಿದರು. 2020 ರಲ್ಲಿ 4250 ಮಾದಕ ವ್ಯಸನದ ಪ್ರಕರಣಗಳು ದಾಖಲಾಗಿವೆ. 2021 ರಲ್ಲಿ 5354 ಪ್ರಕರಣಗಳು ಮತ್ತು ಸೆಪ್ಟೆಂಬರ್ 2022 ರವರೆಗೆ 16986 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.
ಕೇರಳ ಮಾದಕ ವ್ಯಸನದ ಹಿಡಿತದಲ್ಲಿದೆ ಎಂದು ಒಪ್ಪಿಕೊಂಡ ಮುಖ್ಯಮಂತ್ರಿ: ಕಾರ್ಯ ಯೋಜನೆ ಪ್ರಕಟ: ಕೇರಳ ರಾಜ್ಯೋತ್ಸವದಂದು ಮಾದಕ ದ್ರವ್ಯ ವಿರೋಧಿ ಸರಪಳಿ
0
ಸೆಪ್ಟೆಂಬರ್ 16, 2022