ಅಡಕೆಯ ಶಿಲೀಂಧ್ರ ರೋಗ ನಿಯಂತ್ರಣ, ಪೋಷಕಾಂಶ ನಿರ್ವಹಣೆ ಬಗ್ಗೆ ಕೃಷಿ ವಿಚಾರಗೋಷ್ಠಿ-ಸಂವಾದ
0
ಸೆಪ್ಟೆಂಬರ್ 07, 2022
ಕಾಸರಗೋಡು: ಅಡಕೆಯ ಶಿಲೀಂಧ್ರ ರೋಗ ನಿಯಂತ್ರಣ-ಪೋಷಕಾಂಶ ನಿರ್ವಹಣೆ ಬಗ್ಗೆ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ಸೆ. 9ರಂದು ಬೆಳಗ್ಗೆ 10ಕ್ಕೆ ಎಣ್ಮಕಜೆ ಪಂಚಾಯಿತಿಯ ಸ್ವರ್ಗ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ.
ಸಿಪಿಸಿಆರ್‍ಐ ವಿಟ್ಲ ಮತ್ತು ಪಡ್ರೆ ಗ್ರಾಮದ ಅಡಕೆ ಕೃಷಿಕರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರುಗಲಿದೆ. ಹಿರಿಯ ಪತ್ರಕರ್ತ, ಶ್ರೀಪಡ್ರೆ ಸಮಾರಂಭ ಉದ್ಘಾಟಿಸುವರು. ಸಿಪಿಸಿಆರ್‍ಐ ಕಾಸರಗೋಡಿನ ಬೆಳೆ ಉತ್ಪಾದನಾ ವಿಭಾಗದ ಮುಖ್ಯಸ್ಥ ಡಾ. ರವಿ ಭಟ್ ಅಧ್ಯಕ್ಷತೆ ವಹಿಸುವರು.ಗ್ರಾಮ ಪಂಚಾಐಇತಿ ಸದಸ್ಯ ಎಂ. ರಆಮಚಂದ್ರ , ಕೃಷಿಕ ಶ್ರೀಹರಿ ಭಟ್ ಸಜಂಗದ್ದೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭ ನಡೆಯುವ ಸಂವಾದದಲ್ಲಿ ಅಡಕೆ ಮರದ ಆರೋಗ್ಯ ವರ್ಧನೆಯಲ್ಲಿ ಪೋಷಕಾಂಶ ನಿರ್ವಹಣೆಯ ಮಹತ್ವದ ಬಗ್ಗೆ ಡಾ. ರವಿ ಭಟ್, ಅಡಕೆ ತೋಟದ ಸಮಪರ್ಕ ಪೋಷಕಾಂಶ ನಿರ್ವಹಣೆ ಬಗ್ಗೆ ಭವಿಷ್ಯ, ಕಂತುಗಳಲ್ಲಿ ಗೊಬ್ಬರ ನೀಡಿಕೆ-ಕೃಷಿಕಾನುಭವದ ಬಗ್ಗೆ ಶಿವಪ್ರಕಾಶ್ ಪಾಲೆಪ್ಪಾಡಿ, ಅಡಕೆಯ ಹಿಂಗಾರ ಒಣಗುವ ರೋಗ, ಎಲೆಚುಕ್ಕೆ, ಬುಡಕೊಳೆ ಮತ್ತಿತರ ಶಿಲೀಂಧ್ರ ರೋಗಗಳ ಸಮಗ್ರ ನಿರ್ವಹಣೆ ವಿಷಯದಲ್ಲಿಡಾ. ಪ್ರತಿಭಾ ವಿ.ಎಚ್ ಹಾಗೂ ಡಾ. ತವಪ್ರಕಾಶ್ ಪಾಂಡ್ಯನ್, ಅಡಕೆ ತೋಟದಲ್ಲಿ ಸ್ವಚ್ಛತೆಯ ಮಹತ್ವದ ಕೃಷಿಕಾನುಭವದ ಬಗ್ಗೆಡಾ. ವಏಣುಗೋಪಾಲ್ ಕಳೆಯತ್ತೋಡಿ ವಿಷಯ ಮಂಡಿಸುವರು. ಮಧ್ಯಾಹ್ನ 2.30ರಿಂದ ಸಂವಾದ ಕಾರ್ಯಕ್ರಮ ನಡೆಯುವುದು.
Tags