HEALTH TIPS

'ಭಾರತ್​ ಜೋಡೋ ಯಾತ್ರೆ' ಬ್ಯಾನರ್​ನಲ್ಲಿ​ ವೀರ್​ ಸಾವರ್ಕರ್​ ಫೋಟೋ! ಕೊನೆಗೂ ಸತ್ಯ ಒಪ್ಪಿಕೊಂಡ್ರಾ ಎಂದ ಅಭಿಮಾನಿಗಳು

 

              ತಿರುವನಂಪುರ: ಕಾಂಗ್ರೆಸ್​ನ ಪಾದಯಾತ್ರೆಯ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿಕೊಂಡಿದ್ದಾರೆ ಎಂದು ಮೊನ್ನೆಯಷ್ಟೇ ಬಾಯಿತಪ್ಪಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರಿ ಟ್ರೋಲ್​ಗೆ ಒಳಗಾಗಿದ್ದರು. ಆದರೆ ಇದೀಗ ಇಡೀ ಕಾಂಗ್ರೆಸ್ಸೇ ತಲೆತಗ್ಗಿಸುವಂಥ ಘಟನೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ.

                  ಸ್ವಾತಂತ್ರ್ಯ ಹೋರಾಟಗಾರ ವೀರ್​ ಸಾವರ್ಕರ್​ ಅವರನ್ನು ಅವಮಾನಿಸುತ್ತಾ ಕಾಂಗ್ರೆಸ್ಸಿಗರು ಕೆಲವು ತಿಂಗಳುಗಳಿಂದ ಭಾರಿ ಪ್ರತಿಭಟನೆಗಳನ್ನೇ ನಡೆಸುತ್ತಿದ್ದಾರೆ. ವೀರ್​ ಸಾವರ್ಕರ್​ ಹೆಸರಿನಲ್ಲಿ ಇದಾಗಲೇ ಶಿವಮೊಗ್ಗದಲ್ಲಿ ಹಿಂದೂ ಯುವಕರ ಮೇಲೆ ಚೂರಿ ಇರಿದಿರುವ ಘಟನೆಗಳೂ ನಡೆದಿದ್ದು, ಸಾವರ್ಕರ್​ ಹೆಸರನ್ನು ಇಟ್ಟುಕೊಂಡು ಹಿಂಸಾಚಾರವನ್ನೂ ಮಾಡಲಾಗುತ್ತಿದೆ.

                  ವೀರ್​ ಸಾವರ್ಕರ್​ ಹೆಸರು ಕೇಳಿದರೆ ಕಾಂಗ್ರೆಸ್ಸಿಗರು ಕಿಡಿ ಕಾರುತ್ತಿರುವ ನಡುವೆಯೇ, ಅವರು ನಡೆಸುತ್ತಿರುವ 'ಭಾರತ್​ ಜೋಡೋ ಯಾತ್ರೆ'ಯ ಬ್ಯಾನರ್​ನಲ್ಲಿ ವೀರ್​ ಸಾವರ್ಕರ್​ ಫೋಟೋ ಹಾಕಲಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ 'ಭಾರತ್​ ಜೋಡೋ ಯಾತ್ರೆ'ಯ ಬ್ಯಾನರ್​ನಲ್ಲಿ ಇವರ ಚಿತ್ರ ಇದೆ.

                   ಕೇರಳದ ಎರ್ನಾಕುಲಂನಲ್ಲಿ ಕಾಂಗ್ರೆಸ್​ ಮುಖಂಡರನ್ನು ಸ್ವಾಗತಿಸಲು ಹಾಕಿರುವ ಬ್ಯಾನರ್​ನಲ್ಲಿ ವೀರ್​ ಸಾವರ್ಕರ್​ ಫೋಟೋ ಹಾಕಲಾಗಿದ್ದು, ಇದೀಗ ಬಿಜೆಪಿ, ಕಾಂಗ್ರೆಸ್ಸಿಗರನ್ನು ಗೇಲಿ ಮಾಡುವಂತಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ 'ತಡವಾಗಿಯಾದರೂ ಸರಿ, ಸಾವರ್ಕರ್​ ಅವರನ್ನು ಒಪ್ಪಿಕೊಂಡಿರಲ್ಲ. ಇದು ಉತ್ತಮ ಬೆಳವಣಿಗೆ' ಎಂದು ಹೇಳಿದೆ. 'ಇತಿಹಾಸವನ್ನು ಮರೆಮಾಚಲು ಎಷ್ಟೇ ಪ್ರಯತ್ನಿಸಿದರೂ, ಸತ್ಯ ಹೊರಬರಲೇಬೇಕು. ವೀರ ಸಾವರ್ಕರ್​ ಸ್ವಾತಂತ್ರ್ಯ ಹೋರಾಟಗಾರರು ಎಂಬುದನ್ನು ಅಲ್ಲಗಳೆಯಲಾಗದು' ಎನ್ನುತ್ತಿದ್ದಾರೆ ಬಿಜೆಪಿ ಬೆಂಬಲಿಗರು. 'ಅರೆ ಇದೆಂಥ ಬೆಳವಣಿಗೆ?' ಎಂದು ಹಲವರು ಕಮೆಂಟ್​ ಮಾಡುತ್ತಿದ್ದಾರೆ.

                  ವಿಷಯ ತಿಳಿಯುತ್ತಲೇ ಕಾಂಗ್ರೆಸ್​ ಕಾರ್ಯಕರ್ತರು ಸಾವರ್ಕರ್​ ಫೋಟೋಗೆ ಮರೆಯಾಗಿ ಗಾಂಧಿ ಚಿತ್ರವುಳ್ಳ ಬ್ಯಾನರ್​ ಅನ್ನು ಮುಚ್ಚಿದ್ದಾರೆ. ಆದರೆ ಮೂಲ ಬ್ಯಾನರ್​ ಇದಾಗಲೇ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದನ್ನು ಎಲ್​ಡಿಎಫ್​ ಬೆಂಬಲಿತ ಕೇರಳದ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಗಮನಿಸಿ, ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್ ಇದ್ದಾರೆ ಎಂದು ಬರೆದಿದ್ದಾರೆ.

               ನಾಚಿಕೆಯಿಂದ ತಲೆತಗ್ಗಿಸಿರುವ ಕಾಂಗ್ರೆಸ್​ ನಾಯಕರು, 'ಮುದ್ರಕರಿಗೆ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳುಳ್ಳ ಬ್ಯಾನರ್​ ಸಿದ್ಧ ಮಾಡಲು ಸೂಚಿಸಲಾಗಿತ್ತು. ಇಂಟರ್​ನೆಟ್​ನಲ್ಲಿ ಸಿಕ್ಕ ಹೋರಾಟಗಾರರ ಚಿತ್ರಗಳನ್ನು ಅವರು ಅಳವಡಿಸಿದ್ದಾರೆ. ಸಾವರ್ಕರ್​ ಫೋಟೋವನ್ನು ತಪ್ಪಾಗಿ ಮುದ್ರಿಸಿದ್ದಾರೆ' ಎಂದು ಸ್ಪಷ್ಟನೆ ನೀಡಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries