ಉಪ್ಪಳ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಡಿತರ ವರ್ತಕರು ಸೋಮವಾರ ಉಪ್ಪಳದಲ್ಲಿರುವ sಮಂಜೇಶ್ವರ ತಾಲೂಕು ಸರಬರಾಜು ಕಚೇರಿ ಎದುರು ಧರಣಿ ನಡೆಸಿದರು. ಆಗಸ್ಟ್ ತಿಂಗಳ ಕೂಲಿ ಪಾವತಿಸಬೇಕು, ಓಣಂ ಪ್ರಯುಕ್ತದ ಮಾಸಿಕ 1000 ರೂ.ಭತ್ತೆ ನೀಡಬೇಕು, 10 ತಿಂಗಳ ಕಿಟ್ ಕಮಿಷನ್ ಬಾಕಿ ಪಾವತಿಸಬೇಕು, ಸೀಮೆಎಣ್ಣೆ ಸಕ್ಕರೆಗಳ ಕಮಿಷನ್ ಹೆಚ್ಚಳಗೊಳಿಸಬೇಕು, ವರ್ತಕರ ವೇತನ ಪ್ಯಾಕೇಜ್ ಪರಿಷ್ಕರಣೆಗೊಳಿಸಬೇಕು, ಪಡಿತರ ಸರಕುಗಳ ಮೊತ್ತ ಕಡಿತಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಾಗಿ ಧರಣಿಯಲ್ಲಿ ಒತ್ತಾಯಿಸಲಾಯಿತು.
ಮಂಜೇಶ್ವರ ತಾಲೂಕು ಪಡಿತರ ವರ್ತಕರ ಸಂಘದ ನೇತೃತ್ವದಲ್ಲಿ ನಡೆದ ಧರಣಿಯನ್ನು ಎಕೆಆರ್‍ಆರ್‍ಡಿ ರಾಜ್ಯ ಕಾರ್ಯದರ್ಶಿ ಪಿ.ಕೆ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಶರಣ್ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಶಂಕರ ರಾವ್, ಕಂಜಿಲ್ ಮಹಮ್ಮದ್, ಪಿ.ಬಿ.ಅಬೂಬಕರ್, ಪಿ.ಸೋಮಪ್ಪ, ಇಬ್ರಾಹಿಂ ಮಾತನಾಡಿದರು.
ಪಡಿತರ ವರ್ತಕರಿಂದ ಉಪ್ಪಳದಲ್ಲಿ ಧರಣಿ
0
ಸೆಪ್ಟೆಂಬರ್ 27, 2022