HEALTH TIPS

ರೈಲು ಗಾಲಿ ತಯಾರಿಕೆಗೆ ಟೆಂಡರ್ ಆಹ್ವಾನ: ಅಶ್ವಿನಿ ವೈಷ್ಣವ್‌

 

             ನವದೆಹಲಿ: 'ಮೇಕ್‌ ಇನ್‌ ಇಂಡಿಯಾ' ಯೋಜನೆ ಅಡಿಯಲ್ಲಿ ರೈಲು ಗಾಲಿ ತಯಾರಿಕಾ ಘಟಕಗಳನ್ನು ನಿರ್ಮಿಸುವುದಕ್ಕಾಗಿ ರೈಲ್ವೆ ಇಲಾಖೆಯು ಶುಕ್ರವಾರ ಟೆಂಡರ್‌ ಕರೆದಿದೆ. ಖಾಸಗಿ ಕಂಪನಿಗಳಿಗೆ ಟೆಂಡರ್‌ನಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.

              'ಗಾಲಿ ತಯಾರಿಕಾ ಘಟಕಗಳಲ್ಲಿ ₹600 ಕೋಟಿ ವೆಚ್ಚದಲ್ಲಿ ಪ್ರತಿ ವರ್ಷ 80 ಸಾವಿರ ಗಾಲಿಗಳನ್ನು ತಯಾರಿಸಲಾಗುತ್ತಿದೆ' ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

                'ರೈಲ್ವೆ ಇಲಾಖೆಗೆ ಪ್ರತಿ ವರ್ಷ ಎರಡು ಲಕ್ಷ ಗಾಲಿಗಳ ಅಗತ್ಯ ಇದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಒಂದು ಲಕ್ಷ ಗಾಲಿಗಳನ್ನು ತಯಾರಿಸಲಿದೆ. ಇನ್ನುಳಿದ ಗಾಲಿಗಳನ್ನು 'ಮೇಕ್‌ ಇನ್‌ ಇಂಡಿಯಾ' ಅಡಿಯಲ್ಲಿ ತಯಾರಿಸಲು ಉದ್ದೇಶಿಸಲಾಗಿದೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries