ತಿರುವನಂತಪುರ: ಕೇರಳ ಸರ್ಕಾರವು ಈ ಶೈಕ್ಷಣಿಕ ವರ್ಷದಲ್ಲಿ ಲಿಂಗ ತಟಸ್ಥ ಸಮವಸ್ತ್ರವನ್ನು ಘೋಷಿಸಿದೆ.
ಗಂಡು-ಹೆಣ್ಣು ಮಕ್ಕಳಿಗೆ ಒಂದೇ ಸಮವಸ್ತ್ರ ಎಂಬ ಪರಿಕಲ್ಪನೆ ಪ್ರತ್ಯೇಕವಾಗದಿದ್ದಲ್ಲಿ ಹೆಣ್ಣುಮಕ್ಕಳಿಗೆ ಗಟ್ಟಿಯಾಗಿ, ಗಂಡು-ಹೆಣ್ಣಿನ ಬೇರ್ಪಡಿಕೆಯನ್ನು ಸ್ವಲ್ಪ ಮಟ್ಟಿಗಾದರೂ ಹೋಗಲಾಡಿಸಬಹುದು ಎಂದು ಈ ನಡೆಯ ಉಪಕ್ರಮವಾಗಿದೆ. ಆದರೆ ಅಲ್ಪಸಂಖ್ಯಾತರ ವಿರೋಧದೊಂದಿಗೆ ಶಿಕ್ಷಣ ಸಚಿವ ಶಿವನ್ ಕುಟ್ಟಿ ಹೇಳಿಕೆಯನ್ನು ಬಳಿಕ ಹಿಂಪಡೆದಿದ್ದಾರೆ. ಬಳಿಕ, ಪಿಣರಾಯಿ ವಿಜಯನ್ ಅವರು ಲಿಂಗ ತಟಸ್ಥ ಸಮವಸ್ತ್ರವನ್ನು ಈಗ ಜಾರಿಗೆ ತರುವುದಿಲ್ಲ ಎಂದು ಘೋಷಿಸಿದರು. ಇದಕ್ಕೆ ಕಾರಣ ಕಮ್ಯುನಿಸ್ಟ್ ಸರ್ಕಾರದ ಮತಬ್ಯಾಂಕ್ ಆಗಿದ್ದ ಮುಸ್ಲಿಂ ಅಲ್ಪಸಂಖ್ಯಾತರ ವಿರೋಧ.
ಆದರೆ ಕೇರಳದ ವಿದ್ಯಾರ್ಥಿಗಳು ಇದೀಗ ಇದನ್ನೇ ಕೈಗೆತ್ತಿಕೊಂಡಿದ್ದಾರೆ. ಮೊನ್ನೆ ವಶುತಕ್ಕಾಡ್ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಈ ಲಿಂಗ ತಟಸ್ಥತೆಯ ಡ್ರೆಸ್ ಕೋಡ್ ಅನ್ನು ನೆನಪಿಸುವಂತೆ ಹುಡುಗ ಹುಡುಗಿಯರು ಸಮವಸ್ತ್ರ ಮತ್ತು ಟೀ ಶರ್ಟ್‍ಗಳನ್ನು ಒಂದೇ ರೀತಿಯಲ್ಲಿ ಧರಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಕ್ಕಳು ಪರ್ವಾಗಿಲ್ಲ!: ಸರ್ಕಾರದ ಲಿಂಗ-ತಟಸ್ಥ ಉಡುಗೆ ಕೋಡ್ ನ್ನು ನೆನಪಿಸಿ ಹೊಸನಡೆ
0
ಸೆಪ್ಟೆಂಬರ್ 03, 2022
Tags