ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದಾಕ್ಷಣ ನೆರವಾಗಬಹುದು ಎಂದು ಭಾವಿಸಬೇಡಿ ಎಂದು ಹೇಳುವ ಮೂಲಕ ಟರ್ಕಿಗೆ ಭಾರತ ತಿರುಗೇಟು ನೀಡಿದೆ.
ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಯಾವುದೇ ಉಲ್ಲೇಖವು ಉಪಯುಕ್ತ ಅಥವಾ ಸಹಾಯಕವಾಗುವುದಿಲ್ಲ.. ಏಕೆಂದರೆ ಅದನ್ನು ಶಿಮ್ಲಾ ಒಪ್ಪಂದದ ಪ್ರಕಾರ ದ್ವಿಪಕ್ಷೀಯವಾಗಿ ಪರಿಹರಿಸಬೇಕಾಗಿದೆ ಎಂದು ಭಾರತ ಗುರುವಾರ ಹೇಳಿದೆ.
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಯುಎನ್‌ಜಿಎಯನ್ನು ಉದ್ದೇಶಿಸಿ ಮಾತನಾಡಿದ್ದ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು, “ಭಾರತ ಮತ್ತು ಪಾಕಿಸ್ತಾನವು 75 ವರ್ಷಗಳ ಹಿಂದೆ ತಮ್ಮ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಸ್ಥಾಪಿಸಿದ ನಂತರ, ಅವರು ಇನ್ನೂ ಪರಸ್ಪರ ಶಾಂತಿ ಮತ್ತು ಐಕಮತ್ಯವನ್ನು ಸ್ಥಾಪಿಸಿಲ್ಲ. ಇದು ಅತ್ಯಂತ ದುರದೃಷ್ಟಕರ. ಕಾಶ್ಮೀರದಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿ ಮತ್ತು ಸಮೃದ್ಧಿಯನ್ನು ಸ್ಥಾಪಿಸಲಾಗುವುದು ಎಂದು ನಾವು ಭಾವಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ ಎಂದು ಹೇಳಿದ್ದರು.
ಟರ್ಕಿ ಅಧ್ಯಕ್ಷರ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಯುಎನ್‌ಜಿಎಯಲ್ಲಿ ಜಮ್ಮು ಮತ್ತು ಕಾಶ್ಮೀರದ ಉಲ್ಲೇಖವು ಉಪಯುಕ್ತ ಅಥವಾ ಸಹಾಯಕವಾಗಿದೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದರು.
2019 ರಲ್ಲಿ, ಯುಎನ್ ಜನರಲ್ ಅಸೆಂಬ್ಲಿಯ 74 ನೇ ಅಧಿವೇಶನದ ಸಾಮಾನ್ಯ ಚರ್ಚೆಯಲ್ಲಿ ಭಾಷಣ ಮಾಡುವಾಗ, ಎರ್ಡೊಗನ್ ಅವರು, "(UNSC ಯಿಂದ) ಅಂಗೀಕರಿಸಲ್ಪಟ್ಟ ನಿರ್ಣಯಗಳ ಹೊರತಾಗಿಯೂ, ಕಾಶ್ಮೀರ ವಿಚಾರದ ಕುರಿತು ಮಾತನಾಡಿದ್ದಾರೆ. ಎಂಟು ಮಿಲಿಯನ್ ಜನರು ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ, ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ. ಈ ಸಮಸ್ಯೆಯನ್ನು ಶಿಮ್ಲಾ ಒಪ್ಪಂದದಲ್ಲಿ ಮತ್ತು ದ್ವಿಪಕ್ಷೀಯವಾಗಿ ಮತ್ತು ಭಯೋತ್ಪಾದನೆ ಮುಕ್ತ ಅನುಕೂಲಕರ ವಾತಾವರಣದಲ್ಲಿ ಪರಿಹರಿಸಬೇಕಾಗಿದೆ. UNGA ನಲ್ಲಿ ಕಾಶ್ಮೀರದ ಉಲ್ಲೇಖವು ಉಪಯುಕ್ತ ಅಥವಾ ಸಹಾಯಕವಾಗಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಬಾಗ್ಚಿ ಹೇಳಿದರು.
ಕಳೆದ ವಾರ ಸಮರ್‌ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟರ್ಕಿಯ ಅಧ್ಯಕ್ಷರೊಂದಿಗೆ ಸಭೆ ನಡೆಸಿದ್ದಾರೆ ಎಂದು ಬಾಗ್ಚಿ ಹೇಳಿದರು.