ತಿರುವನಂತಪುರ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕ್ಯಾಪ್ಟನ್ ಎಂಬವರಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಯಾತ್ರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಪ್ರಮುಖರೆ. ಆದರೆ ರಾಹುಲ್ ಗಾಂಧಿ ಎಂಬ ನಾಯಕನ ಸಾಮೀಪ್ಯವೇ ಈ ಯಾತ್ರೆಗೆ ಪ್ರಮುಖ ಪ್ರೇರಣೆಯಾಗಿದೆ ಎಂಬುದು ವೇಣುಗೋಪಾಲ್ ಅವರ ಪ್ರತಿಕ್ರಿಯೆ. ಯಾತ್ರೆಯು ಕಾಶ್ಮೀರವನ್ನು ತಲುಪಿದಾಗ, ಭಾರತದ ರಾಜಕೀಯದಲ್ಲಿ ದೊಡ್ಡ ತಿರುವು ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಕೇರಳದಲ್ಲಿ ಸಿಪಿಎಂ ವಿರುದ್ಧದ ಯಾತ್ರೆಯಲ್ಲ. ಆದರೆ ಎಡಪಕ್ಷಗಳು ಯಾತ್ರೆಯನ್ನು ಅಣಕಿಸಿ ರಂಗಕ್ಕೆ ಬಂದಿವೆ. ತಮ್ಮ ಶತ್ರು ಕಮ್ಯುನಿಸ್ಟರಲ್ಲ, ಭಾರತವನ್ನು ಒಗ್ಗೂಡಿಸುವ ಯಾತ್ರೆ ಇದೀಗ ಸಾಗುತ್ತಿದೆ ಎಂದರು. ಕಂಟೈನರ್ ಪ್ರಯಾಣದ ಟೀಕೆಗಳಿಗೂ ಅವರು ಪ್ರತಿಕ್ರಿಯಿಸಿದರು. ಒಂದು ದಿನದಲ್ಲಿ ಸುಮಾರು 26 ಕಿಲೋಮೀಟರ್ ನಡೆಯಲಾಗುತ್ತದೆ. ಮಲಗಲು ಕಂಟೈನರ್ ಬಳಸುವುದರಲ್ಲಿ ತಪ್ಪೇನಿಲ್ಲ ಎಂಬುದು ಎಐಸಿಸಿ ಪ್ರಧಾನ ಕಾರ್ಯದರ್ಶಿಯವರ ಸಮರ್ಥನೆ ನೀಡಿದರು.
ಕೇರಳದಲ್ಲಿ ಹಲವು ರ್ಯಾಲಿಗಳನ್ನು ಆಯೋಜಿಸುವ ಕಾಂಗ್ರೆಸ್ ಯುಪಿಯಲ್ಲಿ ಕೇವಲ ಒಂದು ದಿನ ಮಾತ್ರ ಭಾರತ್ ಜೋಡೋ ಯಾತ್ರೆ ನಡೆಸುತ್ತಿದೆ ಎಂಬ ಆರೋಪಕ್ಕೆ ಕೆಸಿ ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ. ಇಂತಹ ಆರೋಪ ಮಾಡುವವರು ಮೊದಲು ಭಾರತದ ಭೌಗೋಳಿಕತೆಯನ್ನು ಅರಿತು ಆಮೇಲೆ ಟೀಕಿಸಲು ಬರಲಿ ಎಂದರು. ಸಿಪಿಎಂ ಮೋದಿ ಮತ್ತು ಬಿಜೆಪಿ ಜೊತೆ ರಹಸ್ಯ ಸಂಬಂಧ ಹೊಂದಿದೆ. ರಹಸ್ಯ ಸಂಬಂಧದ ಕಾರಣದಿಂದ ಅಮಿತ್ ಶಾ ಅವರನ್ನು ಕೇರಳಕ್ಕೆ ಆಹ್ವಾನಿಸಿ ಗುಜರಾತ್ ಮಾದರಿ ಅಧ್ಯಯನ ಮಾಡುವಂತೆ ಹೇಳಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯೇ ಪ್ರಮುಖ ಸ್ಫೂರ್ತಿ: ಕೆ.ಸಿ.ವೇಣುಗೋಪಾಲ್
0
ಸೆಪ್ಟೆಂಬರ್ 13, 2022
Tags