ಪೆರ್ಲ: ಜಿ.ಕೆ.ಫ್ರೆಂಡ್ಸ್ ಶೇಣಿ ಕೆ.ಕೆ.ಕಾಡು ಇದರ ಆಶ್ರಯದಲ್ಲಿ
"ಓಣಂ ಮಹೋತ್ಸವ 2022" ವನ್ನು ಕೆ.ಕೆ.ಕಾಡು ಶ್ರೀಕೊರಗ ತನಿಯ ಕಟ್ಟೆ ಪರಿಸರದಲ್ಲಿ
ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಬಂಟುಞÂ್ಞ ಮಾಸ್ತರ್ ಉದ್ಘಾಟಿಸಿದರು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸಿದ್ದರು.ಪಂ.ಸದಸ್ಯ,ಶೇಣಿ ಶ್ರೀಶಾರದಾಂಬ ಎಯುಪಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್, ಶಿಕ್ಷಕ ಶರತ್ಚಂದ್ರ ಶೆಟ್ಟಿ,ಗಿರಿಯಪ್ಪ ಪೂಜಾರಿ ಶೇಣಿ ಮುಖ್ಯ ಅತಿಥಿಗಳಾಗಿದ್ದರು.ಈ ಸಂದರ್ಭದಲ್ಲಿ ಶಿಕ್ಷಣ ಹಾಗೂ ಕೃಷಿ ರಂಗದಲ್ಲಿ ಸಾಧನೆಗೈದ
ಬಂಟುಞÂ್ಞ ಬಂಟ್ ಹಾಗೂ ಕೆಎಸ್ಸಾರ್ಟಿಸಿ ನಿವೃತ್ತ ಉದ್ಯೋಗಿ ನಾರಾಯಣ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.ಕಮಲಾಕ್ಷಿ ವಿ.ನಾಯ್ಕ್ ಸನ್ಮಾನ ಪತ್ರ ವಾಚಿಸಿದರು.ಸಂಘಟನೆಯ ಅಧ್ಯಕ್ಷ ವಸಂತ ನಾಯ್ಕ್ ಶೇಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಜ್ಞಾ ವಿ.ಎಸ್.ಪ್ರಾರ್ಥಿಸಿದರು. ತುಳಸಿ ಸ್ವಾಗತಿಸಿ, ಯೋಗಿತಾ ಶೇಣಿ ವಂದಿಸಿದರು.ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ಜರಗಿತು.