ತ್ರಿಶೂರ್: ಕೇರಳದ ಮೂಲಕ ಸಾಗುತ್ತಿರುವ 'ಭಾರತ್ ಜೋಡೋ ಯಾತ್ರೆ'ಯು ರಾಹುಲ್ ಗಾಂಧಿ ಅವರ ಹಲವಾರು ಜನ ಸೆಳೆಯುವ ಚಟುವಟಿಕೆಗಳಿಂದ ಕುತೂಹಲಕರವಾಗಿ ಮಾಧ್ಯಮಗಲಲ್ಲಿ ಹರಿದಾಡುತ್ತಿದೆ.
ಯಾತ್ರೆಯಲ್ಲಿ ಪಾಲ್ಗೊಳ್ಳಲು ಕೇರಳಕ್ಕೆ ಬಂದಿದ್ದ ಸಿಪಿಐ ಮಾಜಿ ನಾಯಕ ಕನ್ಹಯ್ಯ ಕುಮಾರ್ ಅವರು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಿನ್ನೆ ಗುರುವಾಯೂರ್ ದೇವಸ್ಥಾನದಲ್ಲಿ ದರ್ಶನ ಪಡೆದರು. ಕಟ್ಟಾ 'ವಿರೋಧಾಭಾಸದ ಭೌತವಾದಿ', ಕನ್ಹಯ್ಯಾ ಕುಮಾರ್ ಅವರ ದೇವಸ್ಥಾನ ಭೇಟಿ ರಾಜಕೀಯ ವೀಕ್ಷಕರು ಮತ್ತು ಟ್ರೋಲ್‍ಗಳಿಗೆ ಹಬ್ಬವಾಯಿತು.
ಜೆ ಎನ್ ಯುನಲ್ಲಿ ಉಮರ್ ಖಾಲಿದ್‍ರೊಂದಿಗೆ ಆಜಾದಿ ಘೋಷಣೆಗಳೊಂದಿಗೆ ಹೋರಾಟದ ನೇತೃತ್ವ ವಹಿಸಿದ್ದ ಕನ್ಹಯ್ಯಾ ಕುಮಾರ್ ಅವರನ್ನು ಮಲಯಾಳಂ ಮಾಧ್ಯಮಗಳು ಭಾರತೀಯ ಚೆ ಗುವೇರಾ ಎಂದು ಸಂಬೋಧಿಸಿದ್ದವು. ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದ ಕನ್ಹಯ್ಯ ಕಳೆದ ಲೋಕಸಭೆ ಚುನಾವಣೆಯಲ್ಲಿ ಬೇಗುಸರಾಯ್‍ನಿಂದ ಸ್ಪರ್ಧಿಸಿ ಬಿಜೆಪಿ ಎದುರು ಪರಾಭವಗೊಂಡಿದ್ದರು. ನಂತರ ಕನ್ಹಯ್ಯ ಸಿಪಿಐ ತೊರೆದು ಕಾಂಗ್ರೆಸ್ ಸೇರಿದ್ದರು.
ಜೆಎನ್‍ಯು ಗಲಭೆಯ ಸಂದರ್ಭದಲ್ಲಿ ಕನ್ಹಯ್ಯ ಅವರನ್ನು 'ಭಾರತೀಯ ಚೆ ಗುವೇರಾ ಹುಟ್ಟಿದ್ದಾರೆ, ಮೋದಿಗೆ ಇನ್ನು ನಿದ್ದೆಯಿಲ್ಲದ ರಾತ್ರಿಗಳು' ಎಂದು ಮಲಯಾಳಂ ಮಾಧ್ಯಮಗಳಲ್ಲಿ ಹೆಡ್‍ಲೈನ್‍ಗಳನ್ನು ಬಳಸಿಕೊಂಡು ಇದೀಗ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ಟ್ರೋಲ್‍ಗಳು ಸಂಭ್ರಮಿಸುತ್ತಿವೆ. ಕನ್ಹಯ್ಯಾ ಅವರೊಂದಿಗೆ ಜೆಎನ್‍ಯು ಮುಷ್ಕರದಲ್ಲಿ ಭಾಗವಹಿಸಿದ್ದ ಉಮರ್ ಖಾಲಿದ್ ದೆಹಲಿ ಗಲಭೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.
ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವಂತೆಯೇ ಅಸ್ಸಾಂ ಮತ್ತು ಗೋವಾದಲ್ಲಿ ಕಾಂಗ್ರೆಸ್ ನಾಯಕರು ಸಾಮೂಹಿಕವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ರಾಹುಲ್ ಗಾಂಧಿಗೂ ಹಿನ್ನಡೆಯಾಗಿದೆ. ಅಶೋಕ್ ಗೆಹ್ಲೋಟ್ ರಾಜಸ್ಥಾನದಲ್ಲಿ ಬಂಡಾಯದ ಬಾವುಟ ಹಾರಿಸಿದ್ದು, ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಗುರುವಾಯೂರಪ್ಪನವರ ಮುಂದೆ ಮಂಡಿಯೂರಿದ ಮಾಜಿ 'ಭಾರತೀಯ ಚೆ ಗುವೇರಾ'!: ಅಬ್ಬಾ ರಾಜಕೀಯ ತಂತ್ರಗಾರಿಕೆಯೆ!
0
ಸೆಪ್ಟೆಂಬರ್ 26, 2022
Tags