ಫಾಗ್ವಾರ : ಶನಿವಾರದಿಂದ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಪಂಜಾಬ್ ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ. ಹೀಗಾಗಿ ಭಾರತೀಯ ರೈತ ಒಕ್ಕೂಟ (ಡಯೋಬ) ಪ್ರತಿಭಟನೆಯನ್ನು ಮುಂದೂಡಿದೆ.
ಕೃಷಿ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅವರು, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸೆಪ್ಟೆಂಬರ್ 20ರಂದು ಸಭೆ ನಡೆಸಲಿದ್ದಾರೆ ಎಂದು ಭಾರತೀಯ ರೈತ ಒಕ್ಕೂಟದ ಡಯೋಬ ಭಾಗದ ಅಧ್ಯಕ್ಷ ಮಂಜೀತ್ ಸಿಂಗ್ ರೈ ತಿಳಿಸಿದ್ದಾರೆ.
ಡಯೋಬ ಭಾಗದ ರೈತರಿಗೆ ಪಾವತಿಸಬೇಕಿರುವ ₹ 72 ಕೋಟಿ ಬಾಕಿ ಪಾವತಿಸುವಂತೆ ಮತ್ತು 60 ಲಕ್ಷ ಕ್ವಿಂಟಾಲ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿರುವ ಫಾಗ್ವಾರ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಆರಂಭಿಸುವಂತೆ ಒತ್ತಾಯಿಸಲಾಗುತ್ತಿದೆ ಬಿಕೆಯು ಪ್ರಧಾನ ಕಾರ್ಯದರ್ಶಿ ಸತ್ನಾಮ್ ಸಿಂಗ್ ಸಹನಿ ಹೇಳಿದ್ದಾರೆ.