ತಿರುವನಂತಪುರ: ಸ್ತ್ರೀಯರಿಗೆ ಕಿರುಕುಳ ನೀಡುವವರ ವಿರುದ್ಧ ಕೇರಳ ಪೋಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ. ಕಿರುಕುಳದ ವೇಳೆ ತಕ್ಷಣ ಪೋಲೀಸರಿಗೆ ದೂರು ನೀಡುವಂತೆ ಪೋಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಪ್ರಕಟಣೆಯು ತಮಾμÉಯ ಕಾರ್ಟೂನ್ ಮತ್ತು ಪದಗಳನ್ನು ಒಳಗೊಂಡಿದೆ.
ಕೊರೋನಾ ನಂತರ ಮತ್ತೆ ಶಾಲಾ ಕಾಲೇಜು ಆವರಣದಲ್ಲಿ ‘ಕಿಡಿಗೇಡಿಗಳ’ ಹಾವಳಿ ಶುರುವಾಗಿದ್ದು ಗಮನಕ್ಕೆ ಬಂದಿದೆ. ಇಂತಹವರನ್ನು ಬಂಧಿಸಲು ಗಸ್ತು ಸೇರಿದಂತೆ ಪೋಲೀಸರು ಸಿದ್ಧರಾಗಿದ್ದಾರೆ ಎಂದು ಕೇರಳ ಪೆÇಲೀಸರ ಅಧಿಕೃತ ಸಾಮಾಜಿಕ ಮಾಧ್ಯಮ ಪುಟಗಳು ಹೇಳುತ್ತವೆ.
ನಿಯಂತ್ರಣಕ್ಕೊಳಪಟ್ಟಿದೆ ಎಂದು ಭಾವಿಸಲಾಗಿದ್ದ ಇದು ಶಾಲಾ-ಕಾಲೇಜುಗಳ ಆರಂಭದೊಂದಿಗೆ ಮತ್ತೆ ಕಾಣಿಸಿಕೊಳ್ಳಲಾರಂಭಿಸಿದೆ. ಅಂತಹವರಿಂದ ನಿಮಗೆ ತೊಂದರೆಯಾದರೆ, ತಕ್ಷಣ ವರದಿ ಮಾಡಿ. ಅಗತ್ಯವಿದ್ದಲ್ಲಿ 112ಕ್ಕೆ ಕರೆ ಮಾಡಿ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
"ಕಿರುಕುಳ" ಗಮನಕ್ಕೆ ಬಂದರೆ ನಾವು ಸದಾ ಜೊತೆಗಿದ್ದೇವೆ ಎಂದು ಪೋಲೀಸರಿಂದ ಭರವಸೆ: ತಕ್ಷಣ ತಿಳಿಸಲು ಸಲಹೆ
0
ಸೆಪ್ಟೆಂಬರ್ 24, 2022
Tags