ಕೊಚ್ಚಿ: ರಾಜ್ಯದಲ್ಲಿ ವ್ಯಾಪಕ ದಾಳಿ ನಡೆಸಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಪಾಪ್ಯುಲರ್ ಫ್ರಂಟ್ ನಾಯಕರನ್ನು ಬಂಧಿಸಿರುವ ಎನ್‍ಐಎ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಂಡಿದೆ.
ಕೇರಳದಿಂದ ಇನ್ನಷ್ಟು ನಾಯಕರನ್ನು ಬಂಧಿಸಬೇಕಿದೆ ಎಂದು ತನಿಖಾ ಸಂಸ್ಥೆ ಮಾಹಿತಿ ನೀಡಿದೆ.
ಪಾಪ್ಯುಲರ್‍ಫ್ರಂಟ್ ರಾಜ್ಯ ಕಾರ್ಯದರ್ಶಿ ಸಿಎ ರವೂಫ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಅವರನ್ನು ಬಂಧಿಸಬೇಕಿದೆ. ಅವರು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಹೊರಬೀಳುತ್ತಿದೆ.
ಎನ್‍ಐಎ ನಿನ್ನೆ ವಿವಿಧ ಜಿಲ್ಲೆಗಳಲ್ಲಿ ನಡೆಸಿದ ದಾಳಿಯಲ್ಲಿ 25 ಜನರನ್ನು ಬಂಧಿಸಿದೆ. ಪಿ.ಎಫ್.ಐ ಕಚೇರಿಗಳಿಂದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ದೇಶಾದ್ಯಂತ 106 ಪಾಪ್ಯುಲರ್ ಫ್ರಂಟ್ ನಾಯಕರನ್ನು ಬಂಧಿಸಲಾಗಿದೆ.
ಓ.ಎಂ.ಎ ಸಲಾಂ, ಅಬ್ದುರ್ ರಹಮಾನ್, ಪಿ ಕೋಯಾ, ಅನೀಸ್ ಅಹಮದ್, ಅಫ್ಸರ್ ಪಾμÁ, ಅಬ್ದುಲ್ ವಾಹಿದ್, ಜಜೀರ್, ಶಫೀರ್, ಅಬೂಬಕರ್, ಮುಹಮ್ಮದ್ ಬಶೀರ್, ರಾಷ್ಟ್ರೀಯ ಕಾರ್ಯದರ್ಶಿ ನಸ್ರುದ್ದೀನ್ ಎಳಮರಮ್, ಆಸಿಫ್ ಮಿರ್ಜಾ, ಮುಹಮ್ಮದಲಿ ಜಿನ್ನಾ, ಮುಹಮ್ಮದ್ ಶಾಹಿದ್, ಕರಮಾನ ಅಶ್ರಫ್ ಮೌಲವಿ, ಸಾದಿಕ್ ಅಹಮ್ಮದ್ , ಅನ್ಸಾರಿ , ಮುಜೀಬ್, ನಜ್ಮುದ್ದೀನ್, ಜೈನುದ್ದೀನ್, ಉಸ್ಮಾನ್, ಯಾಹಿಯಾ ತಂಗಲ್, ಮುಹಮ್ಮದಲಿ ಮತ್ತು ಸುಲೈಮಾನ್ ಅವರನ್ನು ನಿನ್ನೆ ಬಂಧಿಸಲಾಗಿದೆ. ಈ ಪೈಕಿ ಹಲವು ನಾಯಕರನ್ನು ದೆಹಲಿಗೆ ಕರೆದೊಯ್ಯಲಾಗಿದೆ. ವಿವರವಾದ ವಿಚಾರಣೆಗಾಗಿ ಅವರನ್ನು ರಾಜಧಾನಿಗೆ ಕರೆದೊಯ್ಯಲಾಯಿತು.
ತಲೆಮರೆಸಿಕೊಂಡ ಕೇರಳ ಪಾಪ್ಯುಲರ್ ಫ್ರಂಟ್ ನಾಯಕರು? ಪ್ರಮುಖ ಈರ್ವರ ಬಂಧನಕ್ಕೆ ಬಲೆಬೀಸಿದ ಎನ್.ಐ.ಎ
0
ಸೆಪ್ಟೆಂಬರ್ 23, 2022
Tags