ಕಾಸರಗೋಡು: ಕೃಷಿನಾಶ ನಡೆಸುತ್ತಿರುವ ಕಾಡಾನೆ ಗುಂಪನ್ನು ಪುಲಿಪರಂಬ್ ಗುಡ್ಡ ದಾಟಿಸುವುದರ ಜತೆಗೆ ಕಾರಡ್ಕ ಬ್ಲಾಕ್ ಪಂಚಾಯಿತಿ ವತಿಯಿಂದ ಆನೆಗಳ ದಾಳಿ ತಡೆಗೆ ರಚಿಸಲಾಗಿರುವ ಸೋಲಾರ್ ತೂಗು ಬೇಲಿಯನ್ನು ಕಾರ್ಯಾಚರಿಸುವ ಮೂಲಕ ಈ ಪ್ರದೇಶದ ನಾಗರಿಕರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಯಿತು.
ಹೆಚ್ಚುತ್ತಿರುವ ಕಾಡಾನೆ ಉಪಟಳ ನಿಗ್ರಹಿಸುವ ಬಗ್ಗೆ ಚರ್ಚಿಸಲು ಕರ್ಮಂತೋಡಿಯ ಬ್ಲಾಕ್ ಪಂಚಾಯಿತಿ ಕಚೇರಿಯಲ್ಲಿ ತ್ರಿಸ್ತರ ಪಂಚಾಯಿತಿ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಅರಣ್ಯ ಇಲಾಖೆ ನೌಕರರು ಹಾಗೂ ಸ್ಥಳೀಯರ ಸಭೆ ಆಯೋಜಿಸಲಾಗಿತ್ತು. ಕಾರಡ್ಕ ಪಂಚಾಯಿತಿಯ ಕಾಡಗ, ಕೊಟ್ಟಂಗುಳಿ, ಮುಳಿಯಾರ್ ಪಂಚಾಯಿತಿಯ ಕಾನತ್ತೂರು, ದೇಲಂಪಾಡಿ ಪಂಚಾಯಿತಿಯ ಚಾಮಕೊಚ್ಚಿ, ಚೆನ್ನಕುಂಡ್ ಭಾಗದಲ್ಲಿ ವ್ಯಾಪಕವಾಗಿ ಬೆಳೆ ನಾಶವಾಗಿರುವುದು ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಆಯೋಜಿಸಲಾಗಿತ್ತು. ಕಾರಡ್ಕ ಪ್ರದೇಶದಲ್ಲಿ ಏಳು ಆನೆಗಳ ಹಿಂಡು ಮತ್ತು ಇತರೆಡೆ ಮೂರು ಆನೆಗಳು ಹಾನಿ ಉಂಟುಮಾಡಿವೆ.
ಆನೆ ಸಂರಕ್ಷಣಾ ಯೋಜನೆಗೆ ಸಂಬಂಧಿಸಿದಂತೆ ಸೋಲಾರ್ ಹ್ಯಾಂಗಿಂಗ್ ಬೇಲಿಗಳ ನಿರ್ಮಾಣವನ್ನು ತ್ವರಿತಗೊಳಿಸಲು ಕಾರ್ಯಪಡೆಯನ್ನೂ ರಚಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಆರ್‍ಆರ್‍ಟಿ ಸೇರಿ ಸುಮಾರು 10 ಆನೆಗಳನ್ನು ಈಗಾಗಲೇ ಒಳ ಕಾಡಿಗೆ ವಾಪಸ್ ಕಳುಹಿಸಿದ್ದಾರೆ. ಚಟುವಟಿಕೆಯನ್ನು ತೀವ್ರಗೊಳಿಸಲು ಸಭೆ ನಿರ್ಧರಿಸಿತು. ಇದರ ಭಾಗವಾಗಿ ಪ್ರತಿ ಪ್ರದೇಶದಲ್ಲಿ ಜನರ ತಂಡಗಳನ್ನು ರಚಿಸಲಾಗುವುದು.
ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತೂಗು ಬೇಲಿ ಕಾಮಗಾರಿ, ಜನಸಂದಣಿ ಕೇಂದ್ರ ಹಾಗೂ ಗಡಿ ಭಾಗಗಳಲ್ಲಿ ಕಾಡಾನೆಗಳನ್ನು ಓಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ವಿಭಾಗೀಯ ಅರಣ್ಯಾಧಿಕಾರಿ ಪಿ.ಬಿಜು ಆನೆಗಳನ್ನು ಓಡಿಸುವ ಕಾರ್ಯಾಚರಣೆ ಕುರಿತು ವಿವರಿಸಿದರು. ಅರಣ್ಯ ವಲಯಾಧಿಕಾರಿ ಟಿ.ಜಿ.ಸೊಲೊಮನ್, ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ಪಂಚಾಯಿತಿ ಅಧ್ಯಕ್ಷರುಗಳಾದ ಪಿ.ವಿ.ಮಿನಿ, ದೇಲಂಪಾಡಿ ಪಂಚಾಯಿತಿ ಅಧ್ಯಕ್ಷೆ ಎ.ಪಿ.ಉಷಾ, ಕಾರಡುಕ ಪಂಚಾಯಿತಿ ಉಪಾಧ್ಯಕ್ಷೆ ಎಂ.ಜನನಿ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್, ಮುಳಿಯಾರ್‍ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಜನಾರ್ದನನ್, ಬ್ಲಾಕ್ ಪಂಚಾಯಿತಿ ಸದಸ್ಯ ಎಂ.ಕುಞಂಬು ನಂಬಿಯಾರ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಎಂ.ಮಾಧವನ್, ಟಿ.ಗೋಪಿನಾಥನ್ ನಾಯರ್, ಶೆರೀಫ್ ಕೊಡವಂಚಿ, ಕೆ.ಕುಞÂರಾಮನ್ ಒಲಿಯತ್ತಟುಕ, ದಾಮೋದರ ವೆಲ್ಲಿಗೆ, ಎ.ಚಂದ್ರಶೇಖರನ್, ಕೆ.ಮುರಳೀಧರನ್, ಪಿ. , ಕೆ.ಶಂಕರನ್, ಶಶಿ ಮುಳಿಯಾರ್, ಟಿ.ಆರ್.ಪ್ರವೀಣ್ ಲಾಲ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಕಾಡಾನೆಗಳ ನಿಗ್ರಹಕ್ಕೆ ತುರ್ತು ಕ್ರಮ: ಸೋಲಾರ್ ತೂಗುಬೇಲಿ ಯೋಜನೆ ಶೀಘ್ರ ಕಾರ್ಯಾರಂಭ: ಸರ್ವಪಕ್ಷ ಸಭೆ ತೀರ್ಮಾನ
0
ಸೆಪ್ಟೆಂಬರ್ 03, 2022
Tags