ಇಡುಕ್ಕಿ: ಪೊಲೀಸರನ್ನು ಸಾಮಾನ್ಯವಾಗಿ ಸಮಾಜದ ಕಾವಲು ನಾಯಿಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಕೇರಳದ ಇಡುಕ್ಕಿ ವಲಯದ ಪೊಲೀಸ್ ಠಾಣೆಯೊಂದನ್ನು ಹಾವುಗಳು ರಕ್ಷಿಸುತ್ತಿವೆ.
ಈ ಪ್ರದೇಶದಲ್ಲಿ ಹೆಚ್ಚಾಗಿರುವ ಮಂಗಗಳ ಕಾಟದಿಂದ ಶೀಲ್ದ್ ಹಾಕುತ್ತಿದ್ದ ಪೊಲೀಸರು, ಕೇರಳ- ತಮಿಳುನಾಡು ಗಡಿಯಲ್ಲಿರುವ ಕುಂಬುಮೆಟ್ಟು ಪೊಲೀಸ್ ಠಾಣೆ ಸುತ್ತ ರಬ್ಬರ್ ಹಾವುಗಳನ್ನು ಹಾಕಿದ್ದಾರೆ. ಮಂಗಗಳ ಉಂಟು ಮಾಡುತ್ತಿದ್ದ ತೊಂದರೆಯಿಂದ ರೋಸಿ ಹೋದ ಪೊಲೀಸರು ಅಂತಿಮವಾಗಿ ಅವುಗಳಿಂದ ತಪ್ಪಿಸಿಕೊಳ್ಳಲು ಹಾವಿನ ಉಪಾಯ ಮಾಡಿದ್ದಾರೆ. ಇಲ್ಲಿಯವರೆಗೂ ಇದು ಯಶಸ್ವಿಯಾಗಿದೆ.
ಚೀನಾ ನಿರ್ಮಿತ ರಬ್ಬರ್ ಹಾವುಗಳನ್ನು ಪೊಲೀಸ್ ಠಾಣೆ ಕಟ್ಟಡದ ಗ್ರೀಲ್ ಗಳು, ಮರದ ಹತ್ತಿರವಿರುವ ಬ್ರಾಂಚ್ ಗಳು ಮತ್ತಿತರ ಕಡೆಗಳಲ್ಲಿ ಇಡಲಾಗಿದೆ. ಈ ರಬ್ಬರ್ ಹಾವುಗಳನ್ನು ಇಟ್ಟ ನಂತರ ಪೊಲೀಸ್ ಠಾಣೆ ಬಳಿ ಯಾವುದೇ ಮಂಕಿಗಳು ಬರುತ್ತಿಲ್ಲ ಎಂದು ಸಬ್ ಇನ್ಸ್ ಪೆಕ್ಟರ್ ಪಿ.ಕೆ. ಲಾಲ್ ಬಾಯ್ ಹೇಳಿದ್ದಾರೆ.
ತಂಡೋಪವಾಗಿ ಮಂಗಗಳು ಬರುವ ಕಡೆಗಳಲ್ಲಿ ರಬ್ಬರ್ ಹಾವುಗಳನ್ನು ಇಟ್ಟರೆ ಅವುಗಳನ್ನು ನಿಯಂತ್ರಿಸಬಹುದು ಎಂದು ಸ್ಥಳೀಯರು ಹೇಳಿದ್ದರು. ಈ ಪ್ರಯೋಗವನ್ನು ಬಳಸಿದ ನಂತರ ಮಂಗಗಳ ಕಾಟ ತಪ್ಪಿದೆ ಎಂದು ಅವರು ತಿಳಿಸಿದರು.