ನವದೆಹಲಿ : 'ನಮ್ಮ ನೆರೆಹೊರೆಯ ರಾಷ್ಟ್ರಗಳ ಭದ್ರತಾ ಪರಿಸರವು ಉತ್ತಮವಾಗಿಲ್ಲ' ಎಂದು ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ವಿವೇಕ್ ರಾಮ್ ಚೌಧರಿ ಮಂಗಳವಾರ ಹೇಳಿದ್ದಾರೆ.
ಭಾರತೀಯ ರಕ್ಷಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, 'ದೇಶವು ವಿವಿಧ ಬಗೆಯ ಬೆದರಿಕೆಗಳನ್ನು ಎದುರಿಸುತ್ತಿದೆ.ಹೈಬ್ರಿಡ್ ಯುದ್ಧದಂತಹ ವಿಭಿನ್ನ ಸವಾಲುಗಳು ನಮ್ಮ ಎದುರಿಗಿವೆ. ಈ ಬಗೆಯ ಯುದ್ಧ ಪ್ರಕಾರಗಳಿಗೆ ದೇಶವು ಸನ್ನದ್ಧವಾಗಬೇಕಿರುವುದು ಅತ್ಯಗತ್ಯ' ಎಂದಿದ್ದಾರೆ.