ಬದಿಯಡ್ಕ/:ವಿಟ್ಲ: ಬೈಕ್ ಮತ್ತು ಪಿಕ್ ಅಪ್ ವಾಹನ ಡಿಕ್ಕಿಯಾಗಿ ಬದಿಯಡ್ಕ ನಿವಾಸಿ ಯುವಕ ದಾರುಣನಾಗಿ ಮೃತಪಟ್ಟ ಘಟನೆ ನಿನ್ನೆ ವಿಟ್ಲ ಅಳಿಕೆ ಸಮೀಪದ ಮೈರೆ ಎಂಬಲ್ಲಿ ನಡೆದಿದೆ.
ಬದಿಯಡ್ಕ ಕಿನ್ನಿಮಾಣಿ ದೈವಕ್ಷೇತ್ರ ಸಮೀಪದ ನಿವಾಸಿ, ಬದಿಯಡ್ಕದ ಪತ್ರಿಕಾ ವಿತರಕ ರಾಮಚಂದ್ರ ಚೆಟ್ಟಿಯಾರ್ ಎಂಬವರ ಪುತ್ರ ಸಂದೇಶ್ ಚೆಟ್ಟಿಯಾರ್(33)ಮೃತ ದುರ್ದೈವಿ.
ಸಂದೇಶ್ ಚೆಟ್ಟಿಯಾರ್ ವಿಟ್ಲ ಭಾಗದಿಂದ ಪೆರ್ಲ ಭಾಗದತ್ತ ಬರುತ್ತಿದ್ದಾಗ ಎದುರು ಭಾಗದಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ವೇಗಕ್ಕೆ ಸಂದೇಶ್ ಸ್ಥಳದಲ್ಲೇ ಮೃತರಾದರು ಎನ್ನಲಾಗಿದೆ. ಅವಿವಾಹಿತರಾಗಿದ್ದ ಇವರು ಹವ್ಯಾಸಿ ಗಾಯಕರಾಗಿ, ಸಮಾಜ ಸೇವಕರಾಗಿ ಜನಜನಿತರಾಗಿದ್ದರು. ವಿಟ್ಲ ಪೋಲೀಸರು ಪ್ರಕರಣ ದಾಖಲಿಸಿ ಮಹಜರು ನಡೆಸಿದರು. ಇಂದು ಬದಿಯಡ್ಕದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ತಂದೆ, ತಾಯಿ, ಸಹೋದರ, ಸಹೋದರಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಬೈಕ್-ಟಿಪ್ಪರ್ ಡಿಕ್ಕಿ: ಬದಿಯಡ್ಕ ನಿವಾಸಿ ದಾರುಣ ಮೃತ್ಯು
0
ಸೆಪ್ಟೆಂಬರ್ 24, 2022
Tags