HEALTH TIPS

ಬಿಸಿಲಿನಲ್ಲಿ ಮೊಬೈಲ್ ಬಳಕೆ ಮಾಡುವುದು ಆದಷ್ಟು ತಡೆಯಿರಿ: ಇದರಿಂದ ಕುರುಡು ಉಂಟಾಗುತ್ತೆ ಹುಷಾರ್‌

 ನಾವು ಈಗ ಡಿಜಿಟಲ್ ಯುಗದಲ್ಲಿ ಬಾಳುತ್ತಿದ್ದೇವೆ. ಫೋನ್ ಅಥವಾ ಲ್ಯಾಪ್ ಟಾಪ್ ಬಳಕೆ ಇಲ್ಲದೆ ಬದುಕುವುದು ಇಂದಿನ ದಿನಗಳಲ್ಲಿ ಕಷ್ಟವಾಗುತ್ತಿದೆ. ಪ್ರತಿನಿತ್ಯವೂ ಫೋನ್ ಹಾಗೂ ಲ್ಯಾಪ್ ಟಾಪ್ ಪರದೆ ನೋಡದೆ ದಿನ ಆರಂಭವಾಗುವುದಿಲ್ಲ ಎನ್ನುವ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಯಾಕೆಂದರೆ ಕೆಲಸದಿಂದ ಹಾಗೂ ಪರ್ಸನಲ್ ಆಗಿ ಮೊಬೈಲ್ ಬಳಕೆ ಹೆಚ್ಚುತ್ತಿದೆ. ಹೀಗೆ ಮೊಬೈಲ್ ಬಳಕೆ ಜಾಸ್ತಿಯಾಗುತ್ತಿರುವುದರಿಂದ ಕಣ್ಣಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೌದು, ಕಣ್ಣು ಹಾಗೂ ಮೊಬೈಲ್ ಬಳಕೆಗೆ ಅವಿನಾಭಾವ ಸಂಬಂಧವಿದೆ. ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದರೆ ಕಣ್ಣಿಗೆ ಆಪತ್ತು ಬರುವ ಸಾಧ್ಯತೆ ಇದೆ. ಆದರೆ ನಿಮಗೊಂದು ಗೊತ್ತಾ? ನಿಮ್ಮ ಫೋನ್‌ಗಳನ್ನು ಬಿಸಿಲಿನಲ್ಲಿ ಬಳಸುವುದರಿಂದ ಭಾಗಶಃ ಕುರುಡುತನಕ್ಕೆ ಕಾರಣವಾಗಬಹುದು. ಹೌದು, ಬಿಸಿಲಿನಲ್ಲಿ ತಮ್ಮ ಫೋನ್‌ಗಳನ್ನು ಬಳಸಿದ ನಂತರ ವಿವಿಧ ಹಂತದ ದೃಷ್ಟಿ ನಷ್ಟವನ್ನು ಅನುಭವಿಸಿದ ಇಬ್ಬರು ರೋಗಿಗಳ ಪ್ರಕರಣದ ಬಗ್ಗೆ ವರದಿಯೊಂದು ತಿಳಿಸಿದೆ. ಹಾಗಾದರೆ ಈ ರೀತಿಯ ದೃಷ್ಟಿ ಸಮಸ್ಯೆಗೆ ಕಾರಣವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಇಬ್ಬರಿಗೆ ಕುರುಡುತನ ಸಂಭವಿಸಿದೆ!

ಹಗಲು ಹೊತ್ತಿನಲ್ಲಿ ಅಂದರೆ ಸೂರ್ಯನ ಬೆಳಕಿನಲ್ಲಿ ಮೊಬೈಲ್ ಬಳಕೆ ಮಾಡಿದ್ದರಿಂದ ಮಹಿಳೆಯೊಬ್ಬರಿಗೆ ಭಾಗಶಃ ಕುರುಡು ಸಂಭವಿಸಿರುವ ಬಗ್ಗೆ ಜರ್ನಲ್ ಆಫ್ ಮೆಡಿಕಲ್ ವರದಿಯೊಂದನ್ನು ಮಾಡಿದೆ. ಮಹಿಳೆಗೆ ಕುರುಡುತನ ಬಿಸಿಲಿನಿಂದ ಸಂಭವಿಸಿದ ಬಗ್ಗೆ ಸಾಬೀತಾಗಿದ್ದರಿಂದ ಈ ಘಟನೆ ಬಳಿಕ ಬಿಸಿಲಿನ ದಿನದಲ್ಲಿ ಫೋನ್ ಬಳಸದಂತೆ ವೈದ್ಯರು ಎಚ್ಚರಿಸಿದ್ದಾರೆ. ಈ ರೀತಿ ಬಳಕೆ ಮಾಡುವುದು ಕಣ್ಣುಗಳಿಗೆ ಅಪಾಯಕಾರಿ ಎಂದು ವೈದ್ಯರು ಹೇಳಿದ್ದಾರೆ. ಫೋನ್ ಪರದೆಯ ಮೇಲೆ ಸೂರ್ಯನ ಶಕ್ತಿಯುತ ಪ್ರತಿಫಲನಕ್ಕೆ ಒಡ್ಡಿಕೊಂಡ ನಂತರ ಕೆಲವು ಗಂಭೀರವಾದ ರೆಟಿನಾದ ಹಾನಿಯಿಂದಾಗಿ ಕುರುಡುತನ ಉಂಟಾಗುತ್ತದೆ ಎಂದು ವೈದ್ಯರು ಅಧ್ಯಯನದ ಮೂಲಕ ತಿಳಿದಿದ್ದಾರೆ. ಈ ರೀತಿ ಸೂರ್ಯನ ಬೆಳಕಿನ ಜೊತೆ ಮೊಬೈಲ್ ಬಳಕೆಯಿಂದ ಇಬ್ಬರಿಗೆ ಕುರುಡುತನ ಸಂಭವಿಸಿದೆ ಇನ್ನು ಇವರಿಗೆ. ಸೋಲಾರ್ ಮ್ಯಾಕ್ಯುಲೋಪತಿ ಮೂಲಕ ರೋಗನಿರ್ಣಯ ಮಾಡಲಾಗಿದೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.ಎರಡೂ ರೋಗಿಗಳು ತಮ್ಮ ಕಣ್ಣುಗಳನ್ನು ಪರದೆಯ ಮೇಲೆ ಮತ್ತು ಸೂರ್ಯನ ಪ್ರತಿಫಲನಕ್ಕೆ ಒಡ್ಡಿದ ನಂತರ ದೀರ್ಘಾವಧಿಯ ಕಣ್ಣಿನ ಹಾನಿ ಸಂಭವಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸೋಲಾರ್ ಮ್ಯಾಕ್ಯುಲೋಪತಿ ಎಂದರೇನು?

ಮ್ಯಾಕ್ಯುಲೋಪತಿ, ಇದನ್ನು ಮ್ಯಾಕ್ಯುಲರ್ ಡಿಜೆನರೇಶನ್ ಎಂದೂ ಕರೆಯುತ್ತಾರೆ. ಇದು ರೆಟಿನಾದ ಹಿಂಭಾಗದ ಮೇಲೆ ಪರಿಣಾಮ ಬೀರುವ ಒಂದು ಕಾಯಿಲೆಯಾಗಿದೆ. ಇದನ್ನು ಮ್ಯಾಕುಲಾ ಎಂದು ಕೂಡ ಕರೆಯಲಾಗುತ್ತದೆ. ಮ್ಯಾಕ್ಯುಲೋಪತಿ ಇರುವವರು ಸಂಪೂರ್ಣವಾಗಿ ಕುರುಡರಾಗುವುದಿಲ್ಲ, ಆದರೆ ಆಗಾಗ್ಗೆ ತಮ್ಮ ಕೇಂದ್ರ ದೃಷ್ಟಿ ಕಳೆದುಕೊಳ್ಳುತ್ತಾರೆ. ಸೋಲಾರ್ ಮ್ಯಾಕ್ಯುಲೋಪತಿಯ ಸಂದರ್ಭದಲ್ಲಿ, ಸೂರ್ಯನಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ರೆಟಿನಾ ಮತ್ತು ಮ್ಯಾಕುಲಾ ಹಾನಿಯನ್ನು ಅನುಭವಿಸಬಹುದು. ಸ್ತ್ರೀ ರೋಗಿಯ ಸಂದರ್ಭದಲ್ಲಿ, ಸೂರ್ಯನ ಹಾನಿಯು ಆರಂಭದಲ್ಲಿ ದೂರದಲ್ಲಿರುವ ಆಕಾರಗಳನ್ನು ಪ್ರತ್ಯೇಕಿಸಲು ಕಷ್ಟವಾಗಬಹುದು. ಆದಾಗ್ಯೂ, ನಂತರ ಇದನ್ನು ಶಾಶ್ವತ ಕೇಂದ್ರ ಸ್ಕಾಟೋಮಾ ಎಂದು ಗುರುತಿಸಲಾಯಿತು, ಇದು ವ್ಯಕ್ತಿಯ ದೃಷ್ಟಿಯ ಮಧ್ಯದಲ್ಲಿ ಕಂಡುಬರುವ ಕುರುಡು ತಾಣವಾಗಿದೆ. ಸುಲಭವಾಗಿ ಹೇಳುವುದಾದರೆ ಸೂರ್ಯನ ಬೆಳಕಿಗೆ ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಇಂತಹ ಸಮಸ್ಯೆ ಉಂಟಾಗಬಹುದು.

ಯುವ ಪೀಳಿಗೆ ಹೆಚ್ಚಾಗಿ ಈ ಸಮಸ್ಯೆಗೊಳಗಾಗಬಹುದು!

ವರದಿಯ ಪ್ರಕಾರ 20 ವರ್ಷದ ಒಬ್ಬಳು ಯುವತಿ ತೀವ್ರ ತರದ ಬಿಸಿಲಿನ ವೇಳೆ ಸಮುದ್ರದ ತಟದಲ್ಲಿ ಕುಳಿತು ಮೊಬೈಲ್ ಬಳಕೆ ಮಾಡುತ್ತಿದ್ದಳು. ಇನ್ನೊಬ್ಬ 30 ವರ್ಷದ ಯುವಕನೊಬ್ಬ ತನ್ನ ಮನೆಯ ಟ್ಯಾರೆಸ್ ನಲ್ಲಿ ಕುಳಿತು ಮೊಬೈಲ್ ಟ್ಯಾಬ್ ಬಳಕೆ ಮಾಡುತ್ತಿದ್ದನು. ಈ ಇಬ್ಬರ ಪೈಕಿ ಇಪ್ಪತ್ತು ವರ್ಷದ ಯುವತಿಗೆ ಕಣ್ಣಿನ ಸಮಸ್ಯೆ ತೀವ್ರವಾಗಿ ಕಾಡಿದೆ. ಇದರರ್ಥ ಯುವ ಪೀಳಿಗೆಗೆ ಈ ಸಮಸ್ಯೆ ಜಾಸ್ತಿಯಾಗಿ ಕಾಡುತ್ತಿದೆ ಎನ್ನುವುದು.

ಇದನ್ನು ತಡೆಯುಗಟ್ಟುವುದು ಹೇಗೆ?

ಸೂರ್ಯನ ಬೆಳಕಿನಿಂದ ಸೋಲರ್ ಮ್ಯಾಕ್ಯುಲೋಪತಿ ಸಮಸ್ಯೆ ಉಂಟಾಗುತ್ತಿದೆ. ಆದರೆ ಸಂಶೊಧನೆ ವೇಳೆ ಇಬ್ಬರು ನಾವು ಸೂರ್ಯನ ಬೆಳಕು ನೇರವಾಗಿ ನೋಡಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅವರಿಗೆ ಸೂರ್ಯನ ಬೆಳಕಿರುವ ವೇಳೆ ಮೊಬೈಲ್ ಬಳಕೆ ಮಾಡಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎನ್ನುವುದು ತಿಳಿದಿದೆ. ಹೀಗಾಗಿ ಸೂರ್ಯನ ಬೆಳಕನ್ನು ನೇರವಾಗಿ ನೋಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಅಲ್ಲದೇ ಸೂರ್ಯನ ಬೆಳಕಿನಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎನ್ನುವುದು ಮತ್ತೊಂದು ಸಲಹೆಯಾಗಿದೆ. ಇನ್ನು ಸೂರ್ಯನ ಬೆಳಕಿನಲ್ಲಿ ಮೊಬೈಲ್ ನೋಡಲೇಬೇಕು ಎನ್ನುವುದಾದರೆ ಕಣ್ಣಿಗೆ ಸಂಬಂಧಪಟ್ಟ ಸನ್ ಗ್ಲಾಸ್ ಅನ್ನು ಬಳಕೆ ಮಾಡುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಸೂರ್ಯನ ಕಿರಣಗಳು ತುಂಬಾ ಹಾನಿಕಾರಕವಾಗಲು ಕಾರಣವೇನು?

ಸೂರ್ಯನ ಕಿರಣಗಳಲ್ಲಿರುವ UVA ಮತ್ತು UVB ವಿಕಿರಣವು ಕಣ್ಣಿನ ಪೊರೆ ಅಥವಾ ಮ್ಯಾಕ್ಯುಲರ್ ಡಿಜೆನರೇಶನ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿಯೇ ತಜ್ಞರು ಹಲವಾರು ಕಣ್ಣಿನ ಕಾಯಿಲೆಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಪರಿಣಾಮಕಾರಿ ಸನ್ ಗ್ಲಾಸ್ ಗಳನ್ನು ಧರಿಸಲು ಶಿಫಾರಸು ಮಾಡುತ್ತಾರೆ.


 

 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries