ಮುಳ್ಳೇರಿಯ: ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಭಿವೃದ್ಧಿ ಸಮಿತಿಯ ಪುಸ್ತಕೋತ್ಸವ ಸೆ.17 ರಿಂದ 19 ರವರೆಗೆ ಕಾಞಂಗಾಡು ಹೊಸ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಖ್ಯಾತ ಕಾದಂಬರಿಕಾರ ಎಂ.ಮುಕುಂದನ್ ಪುಸ್ತಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಎಂಬತ್ತರ ಹರೆಯದ ಎಂ.ಮುಕುಂದನ್ ಅವರನ್ನು ಸನ್ಮಾನಿಸಲಾಗುವುದು. ಮುಕುಂದನ್ ಮತ್ತು ನೀವು ವಿಷಯದ ಕುರಿತು ಉಪನ್ಯಾಸ, ಪುಸ್ತಕ ಬಿಡುಗಡೆ, ಲೇಖಕರೊಂದಿಗೆ ಸಂವಾದ, ನಾಟಕೋತ್ಸವ, ಕೊಲ್ಲಂನಲ್ಲಿ ನಡೆದ ರಾಜ್ಯ ನಾಟಕೋತ್ಸವದಲ್ಲಿ ತೃತೀಯ ಸ್ಥಾನ ಪಡೆದ ಜಿಲ್ಲಾ ನಾಟಕ ಬಳಗದ ಸದಸ್ಯರಿಗೆ ಸನ್ಮಾನ, ಪಾವನ ನಾಡು ನಾಟಕ ಪ್ರದರ್ಶನ, ರಾಜ್ಯ ಗ್ರಂಥಾಲಯ ಪರಿಷತ್ತಿನ ಐತಿಹಾಸಿಕ ಕಥಾ ಉಪನ್ಯಾಸ ಸಮಾರಂಭ ಮುಂತಾದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಈ ಬಗ್ಗೆ ಇತ್ತೀಚೆಗೆ ನಡೆದ ಪುಸ್ತಕೋತ್ಸವದ ಸಂಘಟನಾ ಸಮಿತಿ ರಚನಾ ಸಭೆ ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಜಿಲ್ಲಾ ಗ್ರಂಥಾಲಯ ಪರಿಷತ್ ಅಧ್ಯಕ್ಷ ಕೆ.ವಿ.ಕುಂಞÂ್ಞ ರಾಮನ್ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಲೋಕದ ಮುಖ್ಯ ಸಂಪಾದಕ ಪಿ.ವಿ.ಕೆ.ಪನಾಯಾಲ್ ಪುಸ್ತಕೋತ್ಸವದ ರೂಪುರೇμÉ ಮಂಡಿಸಿದರು. ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಕಾರ್ಯದರ್ಶಿ ಡಾ.ಪಿ.ಪ್ರಭಾಕರ, ಕಾಞಂಗಾಡ್ ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಾಕುಮಾರಿ, ರಾಜ್ಯ ಗ್ರಂಥಾಲಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ನ್ಯಾಯವಾದಿ.ಪಿ.ಅಪ್ಪುಕುಟ್ಟನ್, ಟಿ.ರಾಜನ್, ಪಿ.ವೇಣುಗೋಪಾಲನ್ ಮಾತನಾಡಿದರು.
ಪದಾಧಿಕಾರಿಗಳಾಗಿ ಕೆ.ವಿ.ಸುಜಾತಾ (ಅಧ್ಯಕ್ಷೆ), ವಿ.ವಿ.ರಮೇಶನ್ (ಕಾರ್ಯಾಧ್ಯಕ್ಷರು), ಬಿಲ್ಟೆಕ್ ಅಬ್ದುಲ್ಲಾ, ಕೆ.ವಿ.ಮಾಯಾಕುಮಾರಿ, ಕೆ.ವಿ.ಜಯಪಾಲನ್ (ಉಪಾಧ್ಯಕ್ಷರು), ಡಾ. ಪಿ.ಪ್ರಭಾಕರನ್ (ಸಂಯೋಜಕ), ಟಿ.ರಾಜನ್, ವಿ.ಚಂದ್ರನ್ ಮತ್ತು ಪಿ.ರಾಮಚಂದ್ರನ್ ( ಸಹ ಸಂಯೋಜಕರು) ಎಂಬಂತೆ ಆರಿಸಲಾಯಿತು.
ಪುಸ್ತಕೋತ್ಸವ: ಸಂಘಟನಾ ಸಮಿತಿ ರಚನೆ
0
ಸೆಪ್ಟೆಂಬರ್ 04, 2022