ಕುಂಬಳೆ: ಪ್ರಧಾನಿ ನರೇಂದ್ರ ಮೋದಿಯವರ 72ನೇ ವರ್ಷದ ಹುಟ್ಟುಹಬ್ಬದ ದಿನದಂದು ಮೋದಿಯವರ ಭಾವಚಿತ್ರವನ್ನು ಬಿಡಿಸಿದ ಕಳತ್ತೂರಿನ ಅಹ್ಮದಾಲಿ ಮಾಸ್ತರ್ ಹಾಗೂ ಬೀಫಾತಿಮ್ಮ ದಂಪತಿಗಳ ಸುಪುತ್ರಿ ಶೇಣಿ ಶ್ರೀ ಶಾರದಾಂಭಾ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸಿತಾರಾ ಸೈನಬಾ ಕೆ ಇವರನ್ನು ಭಾರತೀಯ ಜನತಾ ಪಕ್ಷ ಕುಂಬಳೆ ಉತ್ತರ ವಲಯ ಸಮಿತಿ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ಅರಿಕ್ಕಾಡಿ, ಒ.ಬಿ. ಸಿ. ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರು, ಯುವಮೋರ್ಚಾ ಮಂಡಲ ಕಾರ್ಯದರ್ಶಿ ರಾಜೇಶ್ ಬಂಬ್ರಾಣ, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯೆ ಪುಷ್ಪಲತಾ ಪಿ ಶೆಟ್ಟಿ ಕಾಜೂರು ಹಾಗೂ ಕಾರ್ಯಕರ್ತರಾದ ಶ್ರೀನಿವಾಸ್ ಆಳ್ವ ಕಳತ್ತೂರು, ಸತೀಶ್ ಶ್ರೀನಗರ, ಈಶ್ವರ ಶಿವಗಿರಿ, ಯಾದವ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.