ಕಾಸರಗೋಡು: 'ವಿಶ್ವ ಹೃದಯ ದಿನ'ವನ್ನುಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಗುರುವಾರ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಘಿ ಕಾಸರಗೋಡು ಜನರಲ್ ಆಸ್ಪತ್ರೆ ಸಿಬ್ಬಂದಿ, ಐಎಂಎ ಕಾಸರಗೋಡು ಶಾಖೆ, ಮಾಲಿಕ್ ದೀನರ್ ಕಾಲೇಜ್ ಆಫ್ ನಸಿರ್ಂಗ್ ಮತ್ತು ಸುಪ್ರಭಾತ ಕಾಸರಗೋಡು ಇವರ ಸಹಯೋಗದಲ್ಲಿ ಸ್ಟಾಫ್ ಕೌನ್ಸಿಲ್ ನೇತೃತ್ವದಲ್ಲಿ ಸಮೂಹ ನಡಿಗೆ ಆಯೋಜಿಸಲಾಗಿತ್ತು.
ಜನರಲ್ ಆಸ್ಪತ್ರೆಯಿಂದ ಆರಂಭವಾಗಿ ಟ್ರಾಫಿಕ್ ಜಂಕ್ಷನ್, ಕೆಎಸ್‍ಆರ್‍ಟಿಸಿ ರಸ್ತೆ ಮೂಲಕ ಸಾಗಿ ಜನರಲ್ ಆಸ್ಪತ್ರೆಗೆ ವಾಪಸಾಗಿತ್ತು. ಜನರಲ್ ಆಸ್ಪತ್ರೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್ ಎ ನೆಲ್ಲಿಕುನ್ನು ಸಮೂಹ ನಡಿಗೆಗೆ ಚಾಲನೆ ನೀಡಿದರು. ನಗರಸಭಾ ಆರೋಗ್ಯ ಸ್ಥಾಯಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್, ಆಸ್ಪತ್ರೆ ಅಧೀಕ್ಷಕ ಡಾ ರಾಜಾರಾಮ ಕೆ, ಉಪ ಅಧೀಕ್ಷಕ ಡಾ. ಜಮಾಲ್ ಅಹಮದ್ ಎ, ಐಎಂಎ ಅಧ್ಯಕ್ಷ ಡಾ ನಾರಾಯಣ ನಾಯ್ಕ್, ಕಾರ್ಯದರ್ಶಿ ಡಾ ಟಿ ಕಾಸಿಂ, ಸ್ಟಾಫ್ ಕೌನ್ಸಿಲ್ ಅಧ್ಯಕ್ಷ ಡಾ ಕೃಷ್ಣನಾಯ್ಕ್, ಡಾ ಜನಾರ್ದನ ನಾಯ್ಕ್, ಶುಭೋದಯ ಕಾಸರಗೋಡು ಪ್ರತಿನಿಧಿ ಅಬೂಬಕರ್, ನಸಿರ್ಂಗ್ ಅಧೀಕ್ಷಕಿ ಮೇರಿ, ಜೆ.ಎಚ್.ಐ.ಶ್ರೀಜಿತ್, ಮಲಿಕ್ ದಿನಾರ್ ನಸಿರ್ಂಗ್ ಕಾಲೇಜಿನ ವಿದ್ಯಾರ್ಥಿ ಜೆಫಿನ್ ಉಪಸ್ಥಿತರಿದ್ದರು. ವ್ಯಾಯಾಮ ಮತ್ತು ಹೃದಯರಕ್ತನಾಳದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆದೇಶದನ್ವಯ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಹೃದಯ ದಿನಾಚರಣೆ: ಕಾಸರಗೋಡಿನಲ್ಲಿ ಸಾಮೂಹಿಕ ನಡಿಗೆ
0
ಸೆಪ್ಟೆಂಬರ್ 29, 2022
Tags