ವರ್ಕಾಡಿ ಪಾವೂರು ತಚ್ಚಿರೆಪದವು ಶ್ರೀ ವಾಸುಕೀ, ನಾಗರಾಜ, ರಕ್ತೇಶ್ವರೀ ಮತ್ತು ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಡಿ. 24 ಹಾಗೂ 25ರಂದು ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಅ. 2ರಂದು ಬೆಳಗ್ಗೆ 10ಕ್ಕೆ ಕ್ಷೇತ್ರದಲ್ಲಿ ಜರುಗಲಿದೆ.
ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನದ ಧರ್ಮದರ್ಶಿ ರಾಜ ಬೆಳ್ಚಪ್ಪಾಡ, ತಂತ್ರಿ ಹೊರಮನೆ ರಾಜೇಶ್ ತಾಳಿತ್ತಾಯ, ಸಮಾಜಸೇವಕ ಹರೀಶ್ ಶೆಟ್ಟಿ ಮಾಡ, ಸಮಿತಿ ಗೌರವಾಧ್ಯಕ್ಷ ಆನಂದ ತಚ್ಚಿರ ಎ ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರತಿಷ್ಠಾ ಬ್ರಹ್ಮಕಲಶ: ನಾಳೆ ಆಮಂತ್ರಣಪತ್ರಿಕೆ ಬಿಡುಗಡೆ
0
ಸೆಪ್ಟೆಂಬರ್ 30, 2022