ತಿರುವನಂತಪುರ: ಕೆಎಸ್‍ಆರ್‍ಟಿಸಿ ಆಡಳಿತ ಮಂಡಳಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ಆಡಳಿತ ಮಂಡಳಿಯ ದುರಾಡಳಿತದಿಂದ ವೇತನ ಪಾವತಿ ವಿಫಲವಾಗಿದೆ ಎಂದಿರುವರು.
ಸರ್ಕಾರದ ನೆರವು ಬಂದರೂ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ. 2021-2022ರ ಅವಧಿಯಲ್ಲಿ ಕೆಎಸ್‍ಆರ್‍ಟಿಸಿಗೆ ಸರ್ಕಾರ 2076 ಕೋಟಿ ರೂ.ಗಳ ನೆರವು ನೀಡಿದೆ ಎಂದೂ ಮುಖ್ಯಮಂತ್ರಿ ಹೇಳಿದರು. ಚಿಂತಾವರಿ ಎಂಬ ಮಾಧ್ಯಮದಲ್ಲಿ ಬರೆದಿರುವ ಲೇಖನದಲ್ಲಿ ಮುಖ್ಯಮಂತ್ರಿಗಳ ಟೀಕೆ ಪ್ರಕಟಗೊಂಡಿದೆ.
2016ರಲ್ಲಿ ಕೆಎಸ್‍ಆರ್‍ಟಿಸಿಯಲ್ಲಿ ಬಿಕ್ಕಟ್ಟು ತೀವ್ರವಾಗಿದ್ದಾಗ ಎಲ್‍ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆಗಿನ ಯುಡಿಎಫ್ ಸರ್ಕಾರದ ನೀತಿಯಿಂದಾಗಿ ಕಾರ್ಮಿಕರ ವೇತನ ಮತ್ತು ಪಿಂಚಣಿ ವಿಳಂಬವಾಗಿತ್ತು. ಪಿಂಚಣಿ ನೀಡದ ಹತಾಶೆಯಿಂದ ಮಾಜಿ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ದುರದೃಷ್ಟಕರ ಘಟನೆಯೂ ನಡೆದಿತ್ತು ಎಂದು ಯುಡಿಎಫ್ ಸರ್ಕಾರವನ್ನು ದೂಷಿಸಿರುವರು.
2016ರ ನಂತರ ಸರ್ಕಾರ ಕೆಎಸ್‍ಆರ್‍ಟಿಸಿಗೆ 7366.4 ಕೋಟಿ ರೂ. ಆರ್ಥಿಕ ನೆರವು ನೀಡಿದ್ದು, 87.38 ಕೋಟಿ ರೂ. ಯೋಜನೆ ಹಂಚಿಕೆಯಾಗಿ ಒಟ್ಟು 7454.02 ಕೋಟಿ ರೂ. ನೀಡಲಾಗಿದೆ. ಇದು ಕೆಎಸ್‍ಆರ್‍ಟಿಸಿ ಇತಿಹಾಸದಲ್ಲೇ ಅತಿ ದೊಡ್ಡ ಆರ್ಥಿಕ ನೆರವು. ಕೊರೊನಾ ಮತ್ತು ಇಂಧನ ಬೆಲೆ ಏರಿಕೆ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಿದೆ. ಸರ್ಕಾರದ ನೆರವು ನೀಡಿದರೂ ಬಿಕ್ಕಟ್ಟು ಬಗೆಹರಿಯದೆ ಇರುವುದಕ್ಕೆ ಇದೂ ಒಂದು ಕಾರಣ ಎಂಬುದು ಲೇಖನದಲ್ಲಿ ಮುಖ್ಯಮಂತ್ರಿಗಳ ವಾದ.
ದಿನವೊಂದಕ್ಕೆ ಸರಾಸರಿ 5 ಕೋಟಿ ರೂ. ಗಳಿಸುತ್ತಿದ್ದರೂ ಸಾಲ ಮರುಪಾವತಿಗೆ 3 ಕೋಟಿ ರೂ.ಬೇಕಾಗುತ್ತದೆ. ಉಳಿದ ಎರಡು ಕೋಟಿ ರೂಪಾಯಿ ಮಾತ್ರ ಕೇಂದ್ರ ಕಚೇರಿ ತಲುಪುತ್ತದೆ. ಈ ಮೊತ್ತವು ಡೀಸೆಲ್ ಇಂಧನದ ವೆಚ್ಚವನ್ನು ಸರಿದೂಗಿಸಲು ಸಹ ಸಾಕಾಗುತ್ತಿಲ್ಲ. 2016-17ರಲ್ಲಿ ಸÀರ್ಕಾರ 325 ಕೋಟಿ ರೂ.ಗಳ ನೆರವು ನೀಡಿದ್ದು, ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ ಸರ್ಕಾರ 2021-22ರಲ್ಲಿ 2076 ಕೋಟಿ ರೂ.ನೀಡಿದೆ. ಆದರೂ ಸರಿಯಾಗಿ ಸಂಬಳ ಕೊಡಲು ಸಾಧ್ಯವಾಗದಿರುವುದು ಕೂಡ ಆಡಳಿತ ಮಂಡಳಿಯ ು ದುರಾಡಳಿತದ ಕಾರಣದಿಂದಾಗಿದೆ.
ಸದ್ಯದ ಬಿಕ್ಕಟ್ಟನ್ನು ಪರಿಹರಿಸಲು ಸುಶೀಲ್ ಖನ್ನಾ ವರದಿಯ ಅನುμÁ್ಠನ ಮಾತ್ರ ಸಾಕಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಕರ್ತವ್ಯದ ಮಾದರಿಯಲ್ಲಿ ಬದಲಾವಣೆ ಸೇರಿದಂತೆ ವಿಷಯಗಳಲ್ಲಿ ಕಟ್ಟುನಿಟ್ಟಿನ ನಿಲುವು ತೆಗೆದುಕೊಳ್ಳುವಂತೆ ನೌಕರರು ಮತ್ತು ಆಡಳಿತ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಲಹೆ ನೀಡಿದರು. ಮತ್ತು ಪಾಲಿಕೆಯನ್ನು ಮೂರು ವಲಯಗಳನ್ನಾಗಿ ಮಾಡಿ ಪ್ರತಿಯೊಂದು ವಲಯವನ್ನು ಸ್ವಯಂ ಆಡಳಿತ ಲಾಭ ಕೇಂದ್ರಗಳನ್ನಾಗಿ ಮಾಡಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಬಿಕ್ಕಟ್ಟಿಗೆ ನಿರ್ವಹಣೆಯ ದುರಾಡಳಿತ ಕಾರಣ: ಸರ್ಕಾರದ ನೆರವು ನೀಡಿದರೂ ಸಂಬಳ ನೀಡಲಾಗದಿರುವುದು ಹೇಯಕರ: ಕೈತೊಳೆದ ಸಿಎಂ
0
ಸೆಪ್ಟೆಂಬರ್ 14, 2022