ಪೆರ್ಲ: ಕಾಂಗ್ರೆಸ್ ಕಾರ್ಯಕರ್ತ, ಸಾಮಾಜಿಕ ಮುಂದಾಳು ಅನಂತಕೃಷ್ಣ ನಾಯಕ್ ಕುಕ್ಕಿಲ ಅವರ ಅಗಲುವಿಕೆಯು ಸಾಮಾಜಿಕ ವಲಯಕ್ಕೆ ತುಂಬಲಾರದ ನಷ್ಟವೆಂದು ಸರ್ವ ಪಕ್ಷ ಸಭೆ ಸಂತಾಪ ವ್ಯಕ್ತಪಡಿಸಿದೆ.
ಬೆದ್ರಂಪಳ್ಳ ಎಎಲ್ ಪಿ ಶಾಲೆಯಲ್ಲಿ ನಡೆದ ಸಭೆಯಲ್ಲಿ ಎಣ್ಮಕಜೆ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಕುಂಬಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ, ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್, ವಾರ್ಡ್ ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ, ಪಂ.ಮಾಜಿ ಉಪಾಧ್ಯಕ್ಷೆ ಆಯಿμÁ ಎ,ಎ, ಸಿಪಿಐಎಂ ನೇತಾರ ಅಬ್ದುಲ್ಲ ಕುಂಞÂ್ಞ, ಬಿಜೆಪಿ ನೇತಾರ ಉದಯ ಚೆಟ್ಟಿಯಾರ್, ಲೀಗ್ ನೇತಾರ ಅಬ್ಬುಬಕ್ಕರ್, ಹಮೀದಾಲಿ, ಬೆದ್ರಂಪಳ್ಳ ದೇಶಾಭಿಮಾನಿ ಗ್ರಂಥಾಲಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮಾಸ್ತರ್, ಬೆದ್ರಂಪಳ್ಳ ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಮಾಸ್ತರ್, ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ಉಪನ್ಯಾಸಕ ಆಶ್ರಫ್ ಮತ್ರ್ಯ ಮೊದಲಾದವರು ನುಡಿ ನಮನ ಸಲ್ಲಿಸಿದರು.